ಭಾರತ-ಚೀನಾ ನಡುವಿನ ಡೋಕ್ಲಾಮ್ ಬಿಕ್ಕಟ್ಟು: ಯಾರ ಪರವೂ ನಿಲ್ಲುವುದಿಲ್ಲ-ನೇಪಾಳ

ಭಾರತ-ಚೀನಾ ನಡುವಿನ ಡೋಕ್ಲಾಮ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆರೆ ರಾಷ್ಟ್ರ ನೇಪಾಳ, ಈ ವಿವಾದದಲ್ಲಿ ತಾನು ಯಾರ ಪರವೂ ನಿಲ್ಲದೇ ತಟಸ್ಥವಾಗಿರುವುದಾಗಿ ಹೇಳಿದೆ.
ನೇಪಾಳ
ನೇಪಾಳ
ಕಠ್ಮಂಡು: ಭಾರತ-ಚೀನಾ ನಡುವಿನ ಡೋಕ್ಲಾಮ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆರೆ ರಾಷ್ಟ್ರ ನೇಪಾಳ, ಈ ವಿವಾದದಲ್ಲಿ ತಾನು ಯಾರ ಪರವೂ ನಿಲ್ಲದೇ ತಟಸ್ಥವಾಗಿರುವುದಾಗಿ ಹೇಳಿದೆ. 
ಡೊಕ್ಲಾಮ್ ಬಿಕ್ಕಟ್ಟಿನ ಬಗ್ಗೆ ಪಿಟಿಐ ನೊಂದಿಗೆ ಮಾತನಾಡಿರುವ ನೇಪಾಳ ಉಪ ಪ್ರಧಾನಿ, ವಿದೇಶಾಂಗ ಸಚಿವ ಕೃಷ್ಣ ಬಹದ್ದೂರ್ ಮಹಾರ, ಸಿಕ್ಕಿಂ ನಲ್ಲಿ ಉಂಟಾಗಿರುವ ಸಮಸ್ಯೆಯನ್ನು ಭಾರತ-ಚೀನಾ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಕೆಲವು ಮಾಧ್ಯಮಗಳು ಡೊಕ್ಲಾಮ್ ವಿವಾದದಲ್ಲಿ ನೇಪಾಳವನ್ನೂ ಎಳೆತರಲು ಯತ್ನಿಸುತ್ತಿವೆ, ಆದರೆ ನೇಪಾಳ ಈ ಬಿಕ್ಕಿಟ್ಟಿನ ವಿಷಯದಲ್ಲಿ ಯಾರ ಪರವೂ ನಿಲ್ಲುವುದಿಲ್ಲ ತಟಸ್ಥವಾಗಿರಲಿದೆ ಎಂದು ಕೃಷ್ಣ ಬಹದ್ದೂರ್ ಮಹಾರ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com