ಡೋಕ್ಲಾಮ್ ಬಿಕ್ಕಟ್ಟು: ಚೀನಾ ಹೇಳಿಕೆಯನ್ನು ಅಲ್ಲಗಳೆದ ಭೂತಾನ್

ಡೋಕ್ಲಾಮ್ ಪ್ರದೇಶ ಚೀನಾಗೆ ಸೇರಿದೆ ಎಂದು ಖುದ್ದು ಭೂತಾನ್ ರಾಷ್ಟ್ರವೇ ದೃಢೀಕರಿಸಿದೆ ಎಂದು ಚೀನಾದ ರಾಜತಾಂತ್ರಿಕ ಅಧಿಕಾರಿಣಿ ವಾಂಗ್ ವೆನ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಡೋಕ್ಲಾಮ್ ಪ್ರದೇಶ ಚೀನಾಗೆ ಸೇರಿದೆ ಎಂದು ಖುದ್ದು ಭೂತಾನ್ ರಾಷ್ಟ್ರವೇ ದೃಢೀಕರಿಸಿದೆ ಎಂದು ಚೀನಾದ ರಾಜತಾಂತ್ರಿಕ ಅಧಿಕಾರಿಣಿ ವಾಂಗ್ ವೆನ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. 
ಡೋಕ್ಲಾಮ್ ಪ್ರದೇಶ ಚೀನಾಗೆ ಸೇರಿದೆ ಎಂದು ಭೂತಾನ್ ರಾಷ್ಟ್ರ ದೃಢೀಕರಿಸಿದ್ದಾಗಿ ಚೀನಾ ಹೇಳಿಕೆ ನೀಡಿದ್ದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಭೂತಾನ್ ಚೀನಾ ಹೇಳಿಕೆಯನ್ನು ತಳ್ಳಿಹಾಕಿದೆ. 
"ಡೋಕ್ಲಾಮ್ ವಿಷಯದ ಬಗ್ಗೆ ನಮ್ಮ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಜೂ.29ರ ಪತ್ರಿಕಾ ಹೇಳಿಕೆಯಲ್ಲಿ ಡೋಕ್ಲಾಮ್ ಕುರಿತು ಭೂತಾನ್ ನಿಲುವನ್ನು ಸ್ಪಷ್ಟಪಡಿಸಲಾಗಿದೆ, ಅದನ್ನು ಗಮನಿಸಬಹುದು ಎಂದು ಎಎನ್ಐ ಗೆ ಭೂತಾನ್ ನ ಸರ್ಕಾರ ಸ್ಪಷ್ಟಪಡಿಸಿದೆ.   
ಡೊಕ್ಲಾಮ್ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ಜೂ.29 ರಂದು ಅಧಿಕೃತ ಪತ್ರಿಕಾ ಪ್ರಕಟಣೆ ಚೀನಾ ಡೊಕ್ಲಾಮ್ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುವುದನ್ನು ವಿರೋಧಿಸಿತ್ತು. ಆದರೆ ಡೋಕ್ಲಾಮ್ ಪ್ರದೇಶ ಚೀನಾಗೆ ಸೇರಿದೆ ಎಂದು ಖುದ್ದು ಭೂತಾನ್ ರಾಷ್ಟ್ರವೇ ದೃಢೀಕರಿಸಿದೆ ಎಂದು ಚೀನಾದ ರಾಜತಾಂತ್ರಿಕ ಅಧಿಕಾರಿಣಿ ವಾಂಗ್ ವೆನ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭೂತಾನ್ ಸ್ಪಷ್ಟನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com