ಡೊಕ್ಲಾಮ್ ಬಿಕ್ಕಟ್ಟು: ಭಾರತ ಪ್ರಬುದ್ಧ ಶಕ್ತಿಯ ರೀತಿಯಲ್ಲಿ ವರ್ತಿಸುತ್ತಿದೆ- ಅಮೆರಿಕ ರಕ್ಷಣಾ ತಜ್ಞ

ಡೊಕ್ಲಾಮ್ ವಿವಾದದಲ್ಲಿ ಭಾರತ ಪ್ರಬುದ್ಧ ಶಕ್ತಿಯ ರೀತಿಯಲ್ಲಿ ವರ್ತಿಸಿದ್ದು, ಚೀನಾ ಅಪ್ರಬುದ್ಧ ರಾಷ್ಟ್ರವಾಗಿ ಕಾಣುವಂತೆ ಮಾಡಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಯೋಧರು (ಸಂಗ್ರಹ ಚಿತ್ರ)
ಭಾರತೀಯ ಯೋಧರು (ಸಂಗ್ರಹ ಚಿತ್ರ)
ವಾಷಿಂಗ್ ಟನ್: ಡೊಕ್ಲಾಮ್ ವಿವಾದದಲ್ಲಿ ಭಾರತ ಪ್ರಬುದ್ಧ ಶಕ್ತಿಯ ರೀತಿಯಲ್ಲಿ ವರ್ತಿಸಿದ್ದು, ಚೀನಾ ಅಪ್ರಬುದ್ಧ ರಾಷ್ಟ್ರವಾಗಿ ಕಾಣುವಂತೆ ಮಾಡಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
ಕಳೆದ 50 ದಿನಗಳ ಬಿಕ್ಕಟ್ಟಿನಲ್ಲಿ ಭಾರತ ಚೀನಾದ ಪ್ರಚೋದನಕಾರಿ, ಯುದ್ಧೋನ್ಮಾದ ಮಾತುಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಹಾಗೆಂದು ಬಿಕ್ಕಟ್ಟು ಎದುರಾದ ಪ್ರದೇಶದಿಂದ ಒಂದಿಂಚೂ ಹಿಂದೆ ಸರಿದಿಲ್ಲ. ಭಾರತ ಸರಿಯಾದುದ್ದನ್ನೇ ಮಾಡಿದೆ ಎಂದು ಯುಎಸ್ ನೇವಲ್ ವಾರ್ ಕಾಲೇಜ್ ನ ಪ್ರೊಫೆಸರ್, ರಕ್ಷಣಾ ತಜ್ಞ ಜೇಮ್ಸ್ ಆರ್ ಹೋಲ್ಮ್ಸ್ ಹೇಳಿದ್ದಾರೆ. 
ಭಾರತ ಡೋಕ್ಲಾಮ್ ಬಿಕ್ಕಟ್ಟಿನ ವಿಷಯದಲ್ಲಿ ಪ್ರಬುದ್ಧ ಶಕ್ತಿಯ ರೀತಿಯಲ್ಲಿ ವರ್ತಿಸಿದ್ದು ಚೀನಾ ಮಾತ್ರ  ಅಪ್ರಬುದ್ಧ ರಾಷ್ಟ್ರವಾಗಿ ಕಾಣುವಂತೆ ಮಾಡಿದೆ. ಚೀನಾ ತನ್ನ ಕಡಲತಂತ್ರವನ್ನು ಮುಂದುವರೆಸಬೇಕಾದರೆ ಭೂಗಡಿಯನ್ನು ಭದ್ರಪಡಿಸಿಕೊಂಡು ನೆರೆ ರಾಷ್ಟ್ರಗಳಿಂದ ಅಪಾಯ ಇಲ್ಲದಂತೆ ಗಮನಹರಿಸಬೇಕಾಗುತ್ತದೆ ಎಂದು ಹೋಲ್ಮ್ಸ್ ಅಭಿಪ್ರಾಯಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com