70ನೇ ಸ್ವಾತಂತ್ರ್ಯ ದಿನ: ದಕ್ಷಿಣ ಏಷ್ಯಾದ ಇತಿಹಾಸದಲ್ಲಿಯೇ ಅತಿ ದೊಡ್ಡ ಧ್ವಜ ಹಾರಿಸಿದ ಪಾಕಿಸ್ತಾನ!

ಆಗಸ್ಟ್ 14ರಂದು 70ನೇ ಸ್ವಾತಂತ್ರ್ಯ ದಿನ ಆಚರಿಸಿಕೊಂಡ ನೆರೆಯ ರಾಷ್ಟ್ರ ಪಾಕಿಸ್ತಾನ ರಾಷ್ಟ್ರ ವಾಘಾ ಗಡಿಯಲ್ಲಿ 400 ಮೀಟರ್ ಎತ್ತರದಲ್ಲಿ ಹಾರಾಡುವಂಥ ಧ್ವಜವನ್ನು ಆರೋಹಣ ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಾಹೋರ್: ಆಗಸ್ಟ್ 14ರಂದು 70ನೇ ಸ್ವಾತಂತ್ರ್ಯ ದಿನ ಆಚರಿಸಿಕೊಂಡ ನೆರೆಯ ರಾಷ್ಟ್ರ ಪಾಕಿಸ್ತಾನ ರಾಷ್ಟ್ರ ವಾಘಾ ಗಡಿಯಲ್ಲಿ 400 ಮೀಟರ್ ಎತ್ತರದಲ್ಲಿ ಹಾರಾಡುವಂಥ ಧ್ವಜವನ್ನು ಆರೋಹಣ ಮಾಡಿದೆ. 
ಇದರಿಂದ ದಕ್ಷಿಣ ಏಷ್ಯಾದಲ್ಲಿಯೇ ಅತಿ ಎತ್ತರದಲ್ಲಿ ಧ್ವಜ ಹಾರಿಸಿದ ರಾಷ್ಟ್ರ ಎಂಬ ಕೀರ್ತಿಗೆ ಪಾಕಿಸ್ತಾನ ಪಾತ್ರವಾಗಿದೆ. ಪ್ರಸ್ತುತ ಪಾಕಿಸ್ತಾನ ಹಾರಿಸಿರುವ ಧ್ವಜ 120*80 ಅಡಿಯ ಬಾವುಟವಾಗಿದ್ದು, ಪಾಕಿಸ್ತಾನದ ಇತಿಹಾಸದಲ್ಲಿಯೇ ಇದು ಅತಿ ಉದ್ದದ ಧ್ವಜವಾಗಿದೆ. 
ಪಾಕಿಸ್ತಾನ ಸ್ವಾತಂತ್ರ್ಯೋತ್ಸವ ಹಿನ್ನಲೆಯಲ್ಲಿ ಭಾನುವಾರ ಮಧ್ಯರಾತ್ರಿಯೇ ಭಾರತದ ಮತ್ತು ಪಾಕಿಸ್ತಾನದ ಗಡಿಯ ವಾಘಾದಲ್ಲಿ ಇದನ್ನು ಪಾಕಿಸ್ತಾನ ಸೇನಾ ಮುಖ್ಯಸ್ಥ ಜ.ಖಮರ್ ಬಾಜ್ವಾ ಹಾರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com