ಅಮೆರಿಕವನ್ನಾಳಲು ಟ್ರಂಪ್‌ಗಿಂತ ನನ್ನ ಮಗಳೇ ಉತ್ತಮ: ಕಿಮ್ ಕರ್ದಾಶಿಯಾನ್

ಅಮೆರಿಕವನ್ನಾಳಲು ಡೊನಾಲ್ಡ್ ಟ್ರಂಪ್ ಗಿಂತ ನನ್ನ ಮಗಳೇ ಉತ್ತಮ ಎಂದು ರೂಪದರ್ಶಿ ಕಿಮ್ ಕರ್ದಾಶಿಯಾನ್ ಹಾಸ್ಯ ಮಾಡಿದ್ದಾರೆ...
ಡೊನಾಲ್ಡ್ ಟ್ರಂಪ್, ಕಿಮ್ ಕರ್ದಾಶಿಯಾನ್
ಡೊನಾಲ್ಡ್ ಟ್ರಂಪ್, ಕಿಮ್ ಕರ್ದಾಶಿಯಾನ್
ಲಾಸ್ ಏಂಜಲೆಸ್: ಅಮೆರಿಕವನ್ನಾಳಲು ಡೊನಾಲ್ಡ್ ಟ್ರಂಪ್ ಗಿಂತ ನನ್ನ ಮಗಳೇ ಉತ್ತಮ ಎಂದು ರೂಪದರ್ಶಿ ಕಿಮ್ ಕರ್ದಾಶಿಯಾನ್ ಹಾಸ್ಯ ಮಾಡಿದ್ದಾರೆ. 
ಹರ್ಪೇರ್'ಸ್ ಬಜಾರ್ ಅರೇಬಿಯ ಮ್ಯಾಗಜಿನ್ ನ ಸೆಪ್ಟೆಂಬರ್ ಸಂಚಿಕೆಯ ಸಂದರ್ಶನದಲ್ಲಿ ಮಾತನಾಡಿದ್ದ 36 ವರ್ಷದ ಕಿಮ್ ಕರ್ದಾಶಿಯಾನ್ ವೈಟ್ ಹೌಸ್ ಕುರಿತಂತೆ ಈ ರೀತಿ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ ಎಂದು ಡೈಲಿಮೇಲ್.ಕೋ.ಯುಕೆ ವರದಿ ಮಾಡಿದೆ. 
ಈಗ ಅಧ್ಯಕ್ಷರೇ ಅಲ್ಲ. ಯಾರೂ ಬೇಕಾದರೂ ಅಮೆರಿಕವನ್ನು ಉತ್ತಮವಾಗಿ ಮುನ್ನಡೆಸಬಹುದು. ಹಾಗೆ ನೋಡಿದರೆ ನನ್ನ ಮಗಳೆ ಉತ್ತಮ ಆಯ್ಕೆ ಎಂದು ಕಿಮ್ ಕರ್ದಾಶಿಯಾನ್ ಹೇಳಿದ್ದಾರೆ. 
ನಾವು ಎಲ್ಲಿದ್ದೇವೆ ಎಂದು ತಿಳಿದುಕೊಳ್ಳಲು ಮತ್ತು ನಮ್ಮ ದೇಶದಲ್ಲಿ ನಾವು ಎಷ್ಟು ಹೆಮ್ಮೆಪಡುತ್ತೇವೆ ಎಂಬುದನ್ನು ತಿಳಿದುಕೊಳ್ಳಲು ನಾವು ತುಂಬಾ ಶ್ರಮಿಸುತ್ತಿದ್ದೇವೆ. ಅಕ್ಷರಶಃ ಇದು ನಮ್ಮನ್ನು ಹಿಮ್ಮುಖವಾಗಿ ಹಿಂದಿರುಗಿಸುತ್ತಿದ್ದು, ಅತ್ಯಂತ ನಿರಾಶಾದಾಯಕ ವಿಷಯವಾಗಿದೆ ಎಂದರು. 
ಪ್ರತಿಯೊಂದು ದಿನವೂ ನೀವು ಏನು ನಡೆಯುತ್ತಿದೆ ಎಂದು ತಿಳಿಯಲು ನಿಜವಾಗಿಯೂ ಸಾಧ್ಯವಾಗದಿದ್ದರೆ, ಮರುದಿನ ಅದು ಮತ್ತಷ್ಟು ಅಸಾಮಾನ್ಯ ಮತ್ತು ದುರಂತವಾಗಿ ಕಾಣುತ್ತದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com