ಚಾಬಹಾರ್ ಬಂದರು: ಅಫ್ಘಾನಿಸ್ತಾನದ ಆರ್ಥಿಕ ಅಭಿವೃದ್ಧಿಯಲ್ಲಿ ಭಾಗಿದಾರ ರಾಷ್ಟ್ರ ಎಂದ ಅಮೆರಿಕ

ಭಾರತವನ್ನು ಅಫ್ಘಾನಿಸ್ತಾನದ ಆರ್ಥಿಕ ಅಭಿವೃದ್ಧಿಯಲ್ಲಿನ ಭಾಗಿದಾರ ರಾಷ್ಟ್ರ ಎಂದು ಅಮೆರಿಕ ಹೇಳಿದ್ದು, ಸರಕು ಸಾಗಣೆ ವಿಷಯದಲ್ಲಿ ಅಫ್ಘಾನಿಸ್ತಾನದೊಂದಿಗಿನ ಆರ್ಥಿಕ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ.
ಚಾಬಹಾರ್ ಬಂದರು
ಚಾಬಹಾರ್ ಬಂದರು
ವಾಷಿಂಗ್ ಟನ್: ಭಾರತವನ್ನು ಅಫ್ಘಾನಿಸ್ತಾನದ ಆರ್ಥಿಕ ಅಭಿವೃದ್ಧಿಯಲ್ಲಿನ ಭಾಗಿದಾರ ರಾಷ್ಟ್ರ ಎಂದು ಅಮೆರಿಕ ಹೇಳಿದ್ದು, ಸರಕು ಸಾಗಣೆ ವಿಷಯದಲ್ಲಿ ಅಫ್ಘಾನಿಸ್ತಾನದೊಂದಿಗಿನ ಆರ್ಥಿಕ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ. 
ಅಫ್ಘಾನಿಸ್ತಾನಕ್ಕಾಗಿ ರಚನಾತ್ಮಕ ಸಹಕಾರ ನೀಡುತ್ತಿರುವುದನ್ನು ಭಾರತ ನಿರೂಪಿಸಿದ್ದು ಅಫ್ಘಾನಿಸ್ತಾನದ ಅಭಿವೃದ್ಧಿಯಲ್ಲಿ ಭಾಗಿದಾರ ರಾಷ್ಟ್ರ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಡೊನಾಲ್ಡ್ ಟ್ರಂಪ್ ಆಡಳಿತದ ದಕ್ಷಿಣ ಏಷ್ಯಾ ಕಾರ್ಯತಂತ್ರದಲ್ಲಿ ಭಾರತದ ಪಾತ್ರದ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಸೆಪ್ಟೆಂಬರ್ ತಿಂಗಳಲ್ಲಿ ನವದೆಯಲಿಯಲ್ಲಿ ನಡೆದ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಟ್ರೇಡ್ ಕಾನ್ಫರೆನ್ಸ್ ಯಶಸ್ಸಿನ್ನು ಉಲ್ಲೇಖಿಸಿರುವ ಅಮೆರಿಕ ಅಧಿಕಾರಿ, ಆಗಸ್ಟ್ 21 ರಂದು ತಮ್ಮ ಭಾಷಣದಲ್ಲಿ ಡೊನಾಲ್ಡ್ ಟ್ರಂಪ್ ಭಾರತವನ್ನು ಅಫ್ಘಾನಿಸ್ತಾನದ ಅಭಿವೃದ್ಧಿ ವಿಷಯದಲ್ಲಿ ಮಹತ್ವದ ಪಾತ್ರ ವಹಿಸುವ ರಾಷ್ಟ್ರ ಎಂದು ಹೇಳಿದ್ದರು.  ಭಾರತ ಅದನ್ನು ನಿರೂಪಿಸಿದೆ ಎಂದಿದ್ದಾರೆ. 
ಭಾರತ ಏರ್ ಕಾರಿಡಾರ್ ನ್ನು ಸ್ಥಾಪಿಸಿದೆ. ಅಷ್ಟೇ ಅಲ್ಲದೇ ಇರಾನ್‌ನ ಚಾಬಹಾರ್‌ ಬಂದರು ಮುಖೇನ ಭಾರತ ರಫ್ತು  ಮಾಡಿದ್ದ ಗೋಧಿ ಇದೀಗ ಆಫ್ಘಾನಿಸ್ತಾನ ತಲುಪಿದೆ. ಇದರಿಂದಾಗಿ  ಭಾರತ ಮತ್ತು ಅಫ್ಘಾನಿಸ್ತಾನ ದೇಶಗಳ ಆರ್ಥಿಕ ಸಂಬಂಧ ಮತ್ತಷ್ಟು ಉತ್ತಮಗೊಳ್ಳಲಿದ್ದು ಈ ರೀತಿಯ ಸರಕು ಸಾಗಣೆಗೆ ಅಮೆರಿಕ ಬೆಂಬಲಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com