ಆಸ್ಟ್ರೇಲಿಯಾದಲ್ಲಿ ಸಲಿಂಗ ಮದುವೆಗೆ ಸಿಕ್ತು ಕಾನೂನು ಮಾನ್ಯತೆ

ಸಲಿಂಗ ಮದುವೆಗೆ ಆಸ್ಟ್ರೀಯಾ ಒಪ್ಪಿಗೆ ನೀಡಿದ್ದರ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಸಂಸತ್ ಸಹ ಸಲಿಂಗ ಮದುವೆಗೆ ಅನುಮೋದನೆ ನೀಡಿದ್ದು ಫೆಬ್ರವರಿಯಲ್ಲಿ ದೇಶದ ಮೊದಲ...
ಸಲಿಂಗ ಮದುವೆ
ಸಲಿಂಗ ಮದುವೆ
ಸಿಡ್ನಿ: ಸಲಿಂಗ ಮದುವೆಗೆ ಆಸ್ಟ್ರೀಯಾ ಒಪ್ಪಿಗೆ ನೀಡಿದ್ದರ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಸಂಸತ್ ಸಹ ಸಲಿಂಗ ಮದುವೆಗೆ ಅನುಮೋದನೆ ನೀಡಿದ್ದು ಫೆಬ್ರವರಿಯಲ್ಲಿ ದೇಶದ ಮೊದಲ ಸಲಿಂಗ ಮದುವೆ ನಡೆಯಲಿದೆ. 
ಆಸ್ಟ್ರೇಲಿಯಾದ ಮೇಲ್ಮನೆಯಲ್ಲಿ ಸಲಿಂಗ ಮದುವೆ ಅಧಿನಿಯಮಕ್ಕೆ 43-12 ಮತಗಳ ಒಪ್ಪಿಗೆ ಸಿಕ್ಕಿದ್ದು ಇಂದು ನಡೆದ ಕೆಳಮನೆಯಲ್ಲೂ ಸಂಸದರು ಸಲಿಂಗ ವಿವಾಹಕ್ಕೆ ಮತ ಚಲಾಯಿಸಿದ್ದರಿಂದ ಅನುಮೋದನೆ ಸಿಕ್ಕಿದೆ. 
ನವೆಂಬರ್ ನಲ್ಲಿ ನಡೆದ ಐತಿಹಾಸಿಕ ಸರ್ವೆ ನಂತರ ಆಸ್ಟ್ರೇಲಿಯಾ ಸರ್ಕಾರ ಸಲಿಂಗ ಮದುವೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ಸರ್ವೆಯಲ್ಲಿ ಸಲಿಂಗ ಮದುವೆ ಕುರಿತು ಜನರು ಅಭಿಮತ ವ್ಯಕ್ತಪಡಿಸಿದ್ದು ಶೇಖ 61ರಷ್ಟು ಮಂದಿ ಒಪ್ಪಿಗೆ ನೀಡಿದ್ದರು. 
ಸಲಿಂಗ ಮದುವೆಗೆ ಕಾನೂನಿನಲ್ಲಿ ಒಪ್ಪಿಗೆ ಸಿಗುತ್ತಿದ್ದಂತೆ ಸಲಿಂಗಕಾಮಿಗಳು ಸಿಹಿ ಹಂಚಿ ಸಂಭ್ರಮಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com