ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಜೋ ಬಿಡೆನ್ ಅವರು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 'ವಿವೇಕದಿಂದ ವರ್ತಿಸಿ' ಎಂದು ಸಲಹೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಮಾ ಆಡಳಿತ ಹೇಗೆ ಪರಿವರ್ತನೆಯಾಯಿತು ಎಂಬುದರ ಕುರಿತ ಟ್ರಂಪ್ ಹೇಳಿಕೆಯನ್ನು ತಳ್ಳಿಹಾಕಿರುವ ಬಿಡೆನ್, ಟ್ರಂಪ್ ಅವರು 'ಪ್ರಬುದ್ಧ'ರಾಗುವ ಸಮಯ ಇದು ಎಂದು ಪಿಬಿಎಸ್ ನ್ಯೂಸ್ ಅವರ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ಟ್ರಂಪ್: ನೀವು ಈಗ ಅಧ್ಯಕ್ಷರು. ನಿಮೆಗೆ ಏನಾದರೂ ಮಾಡುವ ಅವಕಾಶ ಸಿಕ್ಕಿದೆ. ಈಗ ನೀವು ಏನು ಅಂತ ತೋರಿಸಿ' ಎಂದು ಬಿಡೆನ್ ಕೇಳಿಕೊಂಡಿದ್ದಾರೆ.
ಇದೇ ವೇಳೆ, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾರ್ವಜನಿಕವಾಗಿ ಅಮೆರಿಕದ ಗುಪ್ತಚರ ಸಮುದಾಯವನ್ನು ಟೀಕಿಸುವುದು ತುಂಬಾ ಅಪಾಯಕಾರಿ ಎಂದು ಹೇಳಿದ್ದಾರೆ.