ಶವ ಯಾತ್ರೆ ವೇಳೆ 50 ನರ್ತಕಿಯರಿಂದ ಅರೆ ನಗ್ನ ನೃತ್ಯ!

ರಾಜಕಾರಣಿಯೊಬ್ಬರ ಶವ ಯಾತ್ರೆ ವೇಳೆ ಸುಮಾರು 50 ನೃತ್ಯಗಾರ್ತಿಯರು ವಾಹನಗಳ ಮೇಲೆ ಅರೆನಗ್ನ ನೃತ್ಯ ಮಾಡಿರುವ ಘಟನೆ ತೈವಾನ್ ನಲ್ಲಿ ನಡೆದಿದೆ.
ತುಂಗ್ ಹಿಯಾಂಗ್ ಶವ ಯಾತ್ರೆ
ತುಂಗ್ ಹಿಯಾಂಗ್ ಶವ ಯಾತ್ರೆ

ತೈಪೆ: ರಾಜಕಾರಣಿಯೊಬ್ಬರ ಶವ ಯಾತ್ರೆ ವೇಳೆ ಸುಮಾರು 50 ನೃತ್ಯಗಾರ್ತಿಯರು ವಾಹನಗಳ ಮೇಲೆ ಅರೆನಗ್ನ ನೃತ್ಯ ಮಾಡಿರುವ ಘಟನೆ ತೈವಾನ್ ನಲ್ಲಿ ನಡೆದಿದೆ.

ವ್ಯಕ್ತಿ ಸಾವನ್ನಪ್ಪಿದಾಗ ಅವರವರ ಸಾಂಸ್ಕೃತಿಕತೆ ಮತ್ತು ಧಾರ್ಮಿಕತೆಗೆ ಅನುಗುಣವಾದ ಸಂಪ್ರದಾಯದಂತೆ ಶವಯಾತ್ರೆ ಮಾಡುವುದು ಸಾಮಾನ್ಯ. ಆದರೆ ತೈವಾನ್ ನಲ್ಲಿ ವ್ಯಕ್ತಿಯ ಇಚ್ಛೆಗನುಗುಣವಾಗಿ ವಿಶಿಷ್ಟವಾಗಿ ಅಂತಿಮ  ಯಾತ್ರೆ ಮಾಡಲಾಗಿದೆ. ಕಳೆದ ಡಿಸೆಂಬರ್ ನಲ್ಲಿ ಸಾವನ್ನಪ್ಪಿದ್ದ ತೈವಾನ್ ರಾಜಕಾರಣಿ ತುಂಗ್ ಹಿಯಾಂಗ್ ಶವ ಯಾತ್ರೆ ವೇಳೆ ಸುಮಾರು 50 ನರ್ತಕಿಯರು ಪೋಲ್ ಡ್ಯಾನ್ಸ್ ಮಾಡುವ ಮೂಲಕ ಸ್ಥಳೀಯರ ಗಮನ ಸೆಳೆದಿದ್ದಾರೆ.

ಸ್ಥಳೀಯ ಕೌನ್ಸಿಲರ್ ಆಗಿದ್ದ ತುಂಗ್ ಹಿಯಾಂಗ್ ಕಳೆದ ಡಿಸೆಂಬರ್​ನಲ್ಲಿ ಸಾವನ್ನಪ್ಪಿದ್ದರು. ತುಂಟತನ ಮತ್ತು ಅದ್ಧೂರಿತನ ಇಷ್ಟಪಡುತ್ತಿದ್ದ ಅವರ ಶವಯಾತ್ರೆಯನ್ನು ಭರ್ಜರಿಯಾಗಿ ನಡೆಸಲು ತುಂಗ್ ಕುಟುಂಬ ನಿರ್ಧರಿಸಿದ್ದು,  ಅದಕ್ಕಾಗಿ 200 ವಾಹನಗಳನ್ನು ಸಿದ್ಧಪಡಿಸಿ ಮೆರವಣಿಗೆ ಮಾಡಿತ್ತು. ಹಲವು ಕಿಲೋಮೀಟರ್ ದೂರ ಸಾಗಿದ ಮೆರವಣಿಗೆಯಲ್ಲಿ ಅದ್ಧೂರಿ ಬ್ಯಾಂಡ್ ತಂಡ, ಹಾಡುಗಾರರು ಮತ್ತು 50 ಬಿಕಿನಿ ನರ್ತಕಿಯರು ಕೂಡಾ ಇದ್ದು, ಕೆಲ ದ್ವಿಚಕ್ರ  ವಾಹನ ಸವಾರರು ಕೂಡಾ ಡ್ಯಾನ್ಸರ್ ಹುಡುಗಿಯರನ್ನು ನೋಡಲು ಮೆರವಣಿಗೆಯಲ್ಲಿ ಜತೆಯಾಗಿ ಸಾಗಿ ಬಂದದ್ದು ವಿಶೇಷವಾಗಿತ್ತು.

73 ವರ್ಷದ ತುಂಗ್ ಹಿಯಾಂಗ್ ತೈವಾನ್ ನ ಚೈಯ್ಯಿ ಪ್ರಾಂತ್ಯದ ಕೌನ್ಸಿಲರ್ ಆಗಿದ್ದು, ಕಳೆದ ಡಿಸೆಂಬರ್ ನಲ್ಲಿ ಸಾವನ್ನಪ್ಪಿದ್ದರು. ಕಪ್ಪು ಬಣ್ಣದ ಬಿಕಿನಿ ಧರಿಸಿದ್ದ ನರ್ತಕಿಯರು ಜೀಪ್​ನ ಟಾಪ್ ಮೇಲೆ ನಿಂತು ಪೋಲ್ ಡ್ಯಾನ್ಸ್  ಮಾಡುತ್ತಾ ಸಾಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಭರ್ಜರಿ ಶವಯಾತ್ರೆ ನೋಡುಗರ ಅಚ್ಚರಿಗೆ ಕಾರಣವಾಗಿದ್ದು ಮಾತ್ರವಲ್ಲದೆ ಶವಯಾತ್ರೆ ಸಾಗಿದ ದಾರಿಯುದ್ದಕ್ಕೂ ಟ್ರಾಫಿಕ್ ಜಾಮ್ ಗೆ  ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com