ಗ್ವಾದರ್ ಬಂದರು ರಕ್ಷಣೆಗೆ ಚೀನಾದ 2 ನೌಕೆ ನಿಯೋಜನೆ!

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಒಪ್ಪಂದದ ಪ್ರಮುಖ ಮಾರ್ಗವಾಗಿರುವ ಗ್ವಾದರ್ ಬಂದರು ರಕ್ಷಣೆಗೆ ಚೀನಾ ಸೇನೆ ತನ್ನ 2 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಒಪ್ಪಂದದ ಪ್ರಮುಖ ಮಾರ್ಗವಾಗಿರುವ ಗ್ವಾದರ್ ಬಂದರು ರಕ್ಷಣೆಗೆ ಚೀನಾ ಸೇನೆ ತನ್ನ 2 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ ಎಂದು  ತಿಳಿದುಬಂದಿದೆ.

ಮೂಲಗಳ ಪ್ರಕಾರ ಪಾಕಿಸ್ತಾನ ಮತ್ತು ಚೀನಾ ನಡುವಿನ ಸುಮಾರು 46 ಮಿಲಿಯನ್ ಡಾಲರ್ ಮೊತ್ತದ ಸಿಪಿಇಸಿ ಒಪ್ಪಂದದನ್ವಯ ಗ್ವಾದರ್ ಬಂದರು ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗಿದ್ದು, ಈ ಮಾರ್ಗದ ಮುಖಾಂತರವೇ  ಚೀನಾ ಮತ್ತು ಪಾಕಿಸ್ತಾನ ದೇಶಗಳು ಆಮದು ಮತ್ತು ರಫ್ತು ಮಾಡಲಿವೆ. ಹೀಗಾಗಿ ಈ ಮಹತ್ವದ ಬಂದರಿನ ರಕ್ಷಣೆಗಾಗಿ ಚೀನಾ ಸೇನೆ ತನ್ನ 2 ಅತ್ಯಾಧುನಿಕ ಸಮರ ನೌಕೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ ಎಂದು  ತಿಳಿದುಬಂದಿದೆ.

ಪಾಕಿಸ್ತಾನದ ಸೇನಾಉಪಾಧ್ಯಕ್ಷ ಆರಿಫುಲ್ಲಾ ಹುಸೈನಿ ಅವರು ಚೀನಾದ ಸಮರ ನೌಕೆಗಳನ್ನು ನಿನ್ನೆ ಹಸ್ತಾಂತರಿಸಿಕೊಂಡಿದ್ದಾರೆ. ಗ್ವಾದರ್ ರಕ್ಷಣೆಗೆ ಮಾತ್ರವಲ್ಲದೇ ಅರೇಬಿಯನ್ ಸಮುದ್ರದಲ್ಲಿರುವ ತನ್ನ ಗಡಿ ರಕ್ಷಣೆಗೂ ಪಾಕಿಸ್ತಾನ  ಸೇನೆ ಚೀನಾದ ಈ ನೌಕೆಗಳನ್ನು ಬಳಕೆ ಮಾಡಿಕೊಳ್ಳಲಿದೆ.  ಈ ವೇಳೆ ಮಾತನಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥರು ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಚೀನಾದ ಎರಡು ಸಮರ ನೌಕೆಗಳು ಇನ್ನು ಮುಂದೆ ಪಾಕಿಸ್ತಾನದ  ರಕ್ಷಣೆಗಾಗಿ ಕಾರ್ಯ ನಿರ್ವಹಿಸಲಿವೆ. ಸಿಪಿಇಸಿ ಒಪ್ಪಂದದನ್ವಯ ನಿರ್ಮಾಣವಾಗಲಿರುವ ರಸ್ತೆ, ರೈಲು ಮಾರ್ಗಗಳು ಪಾಕಿಸ್ತಾನದಲ್ಲಿರುವ ದೂರ ದೂರದ ಸಂಪರ್ಕ ರಹಿತ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸಲಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ಟಾಂಗ್ ನೀಡಲು ಹೋಗಿ ಚೀನಾ ಹೆಣೆದ ಬಲೆಯಲ್ಲಿ ಸಿಲುಕುತ್ತಿದೆಯೇ ಪಾಕಿಸ್ತಾನ?
ಇತ್ತ ಪಾಕಿಸ್ತಾನ ಚೀನಾದೊಂದಿಗೆ ಸಿಪಿಇಸಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತಕ್ಕೆ ಟಾಂಗ್ ನೀಡುತ್ತಿದ್ದೇನೆ ಎಂದು ಭಾವಿಸಿದೆ. ಆದರೆ ಪಾಕಿಸ್ತಾನ ಚೀನಾ ಹೆಣೆದೆ ಬಲೆಯಲ್ಲಿ ಸಿಲುಕಲಿದೆ ಎಂದು ರಕ್ಷಣಾ ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಸಿಪಿಇಸಿ ಕೇಂದ್ರ ಭಾಗವಾಗಿರುವ ಗ್ವಾದರ್ ಬಂದರು ಪಾಕಿಸ್ತಾನದ ನಿಯಂತ್ರಣದಲ್ಲೇ ಇದ್ದರೂ, ಅದು ಭವಿಷ್ಯದಲ್ಲಿ ಚೀನಾದ ಒಪ್ಪಿಗೆ ಇಲ್ಲದೇ ಬಂದರಿನ ಕುರಿತಂತೆ ಯಾವುದೇ ನಿರ್ಧಾರವನ್ನೂ  ಕೈಗೊಳ್ಳುವಂತಿಲ್ಲ. ಪಾಕಿಸ್ತಾನ ಸೇನೆ ಗ್ಲಾದರ್ ಬಂದರಿನಲ್ಲಿ ನಿಯೋಜನೆಯಾಗಿದ್ದರೂ ಚೀನಾ ಸೇನೆಯ ಆಣತಿಯಂತೆ ಕಾರ್ಯನಿರ್ವಹಿಸಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com