ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ

ಮಹಿಳೆ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ರೇಪ್, ಫೇಸ್ ಬುಕ್ ನಲ್ಲಿ ಲೈವ್ ವಿಡಿಯೋ ಪ್ರಸಾರ!

ಅಘಾತಕಾರಿ ಬೆಳವಣಿಗೆಯೊಂದರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಮೂವರು ಕಾಮುಕರು ವಿಡಿಯೋವನ್ನು ಫೇಸ್ ಬುಕ್ ಲೈವ್ ನಲ್ಲಿ ಪ್ರಸಾರ ಮಾಡಿದ್ದಾರೆ.

ಸ್ಟಾಕ್ ಹೋಮ್: ಅಘಾತಕಾರಿ ಬೆಳವಣಿಗೆಯೊಂದರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಮೂವರು ಕಾಮುಕರು ವಿಡಿಯೋವನ್ನು ಫೇಸ್ ಬುಕ್ ಲೈವ್ ನಲ್ಲಿ ಪ್ರಸಾರ ಮಾಡಿದ್ದಾರೆ.

ಸ್ವೀಡನ್ ನ ಉಪ್ಸಾಲಾದಲ್ಲಿ ಈ ಘಟನೆ ನಡೆದಿದ್ದು, ಫೇಸ್ ಬುಕ್ ಲೈವ್ ನಲ್ಲಿನ ಲೈಂಗಿಕ ದೌರ್ಜನ್ಯದ ವಿಡಿಯೋ ನೋಡಿದ ವ್ಯಕ್ತಿಯೊಬ್ಬರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಎಚ್ಚೆತ್ತ ಸ್ವೀಡನ್ ಪೊಲೀಸರು ಐಪಿ  ಅಡ್ರೆಸ್ ಶೋಧ ಮಾಡಿ ಸ್ಥಳಕ್ಕೆ ಧಾವಿಸಿ ಮೂವರೂ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ 18, 24 ಮತ್ತು 20 ವರ್ಷ ವಯಸ್ಸಿನ ವಿದ್ಯಾರ್ಥಿಗಳಾಗಿದ್ದು, ಬಂಧನದ ವೇಳೆ ಎಲ್ಲರೂ ಪಾನಮತ್ತರಾಗಿದ್ದರು ಎಂದು  ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸರು, "ರಾಜಧಾನಿ ಸ್ಟಾಕ್ ಹೋಮ್ ನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಉಪ್ಸಾಲಾದ ಅಪಾರ್ಟ್ ಮೆಂಟ್ ನಲ್ಲಿ ಪಾನಮತ್ತ ದುಷ್ಕರ್ಮಿಗಳು ಮಹಿಳೆ ಮೇಲೆ  ಸಾಮೂಹಿಕ ಅತ್ಯಾಚಾರವೆಸಗಿ ಅದನ್ನು ಫೇಸ್ ಬುಕ್ ಮೂಲಕ ಲೈವ್ ವಿಡಿಯೋ ಪ್ರಸಾರ ಮಾಡುತ್ತಿದ್ದರು. ಮಹಿಳೆ ಫೇಸ್ ಬುಕ್ ಗ್ರೂಪ್ ವೊಂದರ ಸದಸ್ಯೆಯಾಗಿದ್ದು, ಈ ಗ್ರೂಪ್ ನಲ್ಲಿ ಸುಮಾರು 60 ಸಾವಿರ ಮಂದಿ ಸದಸ್ಯರಿದ್ದಾರೆ.  ಈ ಪೈಕಿ ಗ್ರೂಪ್ ನ ಸದಸ್ಯರಾಗಿರುವ ಜೋಸ್ ಫಿನ್ ಲಂಡ್ ಗ್ರೆನ್ ಎಂಬುವರು ವಿಡಿಯೋವನ್ನು ನೋಡಿ ಕರೆ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ವಿಡಿಯೋ ಪ್ರಸಾರವಾಗುತ್ತಿದ್ದ ಐಪಿ ಅಡ್ರೆಸ್ ಶೋಧ ಮಾಡಿ ಸ್ಥಳಕ್ಕೆ  ಪೊಲೀಸರನ್ನು ರವಾನಿಸಿದೆವು. ಪ್ರಸ್ತುತ ಅತ್ಯಾಚಾರದ ಆರೋಪದ ಮೇರೆಗೆ ಮೂವರು ಶಂಕಿತರನ್ನು ಬಂಧಿಸಲಾಗಿದೆ. ಅಂತೆಯೇ ಸಂತ್ರಸ್ತ ಮಹಿಳೆಯಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಪೊಲೀಸರಿಗೆ ಮಹಿಳೆ ಹೇಳಿಕೆ ನೀಡಿದ್ದು, 24 ವರ್ಷದ ಯುವಕ ಪ್ರಮುಖ ಆರೋಪಿಯಾಗಿದ್ದು, ಅತ್ಯಾಚಾರಕ್ಕೂ ಮುನ್ನ ಬಟ್ಟೆಗಳನ್ನು ಹರಿದು ಹಾಕಿದ್ದ. ಅಂತೆಯೇ ತನ್ನ ಮೇಲೆ ಎರಗುವ ವೇಳೆ ಅದನ್ನು ಮೊಬೈಲ್ ಮೂಲಕ  ಲೈವ್ ಚಾಟ್ ನಲ್ಲಿ ಚಿತ್ರೀಕರಿಸುತ್ತಿದ್ದ ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸ್ವೀಡನ್ ಪೊಲೀಸ್ ವರಿಷ್ಠಾಧಿಕಾರಿಗಳು "ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ವಿಡಿಯೋಗಳನ್ನು ನಾವು ವಶಪಡಿಸಿಕೊಂಡಿದ್ದೇವೆ. ಆದರೆ ಪ್ರಸ್ತುತ ನಮಗೆ ಲಭ್ಯವಾಗಿರುವ  ವಿಡಿಯೋದಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ವಿಡಿಯೋವಾಗಲೀ ಅಥವಾ ಮಹಿಳೆ ಮೇಲೆ ದಾಳಿ ಮಾಡುತ್ತಿರುವ ವಿಡಿಯೋವಾಗಲಿ ದೊರೆತಿಲ್ಲ. ಬದಲಿಗೆ ಮಹಿಳೆ ಅಳುತ್ತಾ ಯಾರಿಗೋ ಕರೆ ಮಾಡುತ್ತಿರುವ ಮತ್ತು ಶಂಕಿತ  ಆರೋಪಿಗಳು ಮದ್ಯ ಸೇವಿಸಿ ಮಾತನಾಡುತ್ತಿರುವ ವಿಡಿಯೋಗಳು ಲಭ್ಯವಾಗಿವೆ. ಪ್ರಕರಣ ಸಂಬಂಧ ಮತ್ತಷ್ಟು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪ್ರಸ್ತುತ ಈ ವಿಡಿಯೋಗಳು ಫೇಸ್ ಬುಕ್ ತಾಣದಿಂದ ಡಿಲೀಟ್ ಮಾಡಲಾಗಿದೆಯಾದರೂ, ವಿಡಿಯೋ ವೈರಲ್ ಆದ್ದರಿಂದ ಕೆಲವು ಖಾಸಗಿ ತಾಣಗಳಲ್ಲಿ ಕೆಲ ತುಣುಕುಗಳು ಹರಿದಾಡುತ್ತಿವೆ.

Related Stories

No stories found.

Advertisement

X
Kannada Prabha
www.kannadaprabha.com