ಅಮೆರಿಕದ ವಿಶ್ವಸಂಸ್ಥೆ ರಾಯಭಾರಿಯಾಗಿ ಇಂಡೋ-ಅಮೆರಿಕನ್ ಮಹಿಳೆ ನಿಕ್ಕಿ ಹ್ಯಾಲೆ ಅಧಿಕೃತ ನೇಮಕ

ನಿರೀಕ್ಷೆಯಂತೆಯೇ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿಯಾಗಿ ದಕ್ಷಿಣ ಕ್ಯಾರೋಲಿನಾ ಗವರ್ನರ್ ನಿಕ್ಕಿ ಹ್ಯಾಲೆ ಅವರನ್ನು ನೇಮಕ ಮಾಡಿದ್ದಾರೆ.
ನಿಕ್ಕಿ ಹ್ಯಾಲೆ (ಸಂಗ್ರಹ ಚಿತ್ರ)
ನಿಕ್ಕಿ ಹ್ಯಾಲೆ (ಸಂಗ್ರಹ ಚಿತ್ರ)
Updated on: 

ವಾಷಿಂಗ್ಟನ್: ನಿರೀಕ್ಷೆಯಂತೆಯೇ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿಯಾಗಿ ದಕ್ಷಿಣ ಕ್ಯಾರೋಲಿನಾ ಗವರ್ನರ್ ನಿಕ್ಕಿ ಹ್ಯಾಲೆ ಅವರನ್ನು ನೇಮಕ ಮಾಡಿದ್ದಾರೆ.

ಈ ಹಿಂದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡಿದ್ದ ನಿಕ್ಕಿ ಹ್ಯಾಲೆ ಅವರಿಗೆ ನಿರೀಕ್ಷೆಯಂತೆಯೇ ವಿಶ್ವಸಂಸ್ಥೆ ರಾಯಭಾರಿ ಸ್ಥಾನ ದೊರೆತಿದೆ. ಈ ಬಗ್ಗೆ ಅಮೆರಿಕ ಸರ್ಕಾರ ಅಧಿಕೃತ ಪ್ರಕಟಣೆ  ಹೊರಡಿಸಿದೆ. ಅಮೆರಿಕ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿ ನಿಕ್ಕಿ ಹ್ಯಾಲೆ ಅವರ ವಿಶ್ವಸಂಸ್ಥೆ ರಾಯಭಾರಿ ಅರ್ಜಿಗೆ ಅನುಮೋದನೆ ನೀಡಿದೆ.

ಹೀಗಾಗಿ ಪ್ರಸ್ತುತ ದಕ್ಷಿಣ ಕ್ಯಾರೋಲಿನಾ ಗವರ್ನರ್ ಆಗಿರುವ ಹ್ಯಾಲೆ ಅವರು ಶೀಘ್ರದಲ್ಲೇ ತಮ್ಮ ಸ್ಥಾನವನ್ನು ತ್ಯಜಿಸಿ ವಿಶ್ವಸಂಸ್ಥೆ ರಾಯಭಾರಿ ಸ್ಥಾನ ಅಲಂಕರಿಸಲಿದ್ದಾರೆ. ಹ್ಯಾಲೆ ಅವರು ಡೊನಾಲ್ಡ್ ಟ್ರಂಪ್ ಅವರ ಸಂಪುಟಕ್ಕೆ  ಆಯ್ಕೆಯಾದ ಮೊದಲ ಮಹಿಳಾ ಪ್ರತಿನಿಧಿಯಾಗಿದ್ದು, ಹ್ಯಾಲೆ ಭಾರತ ಮೂಲದವರಾಗಿದ್ದಾರೆ. ಇವರ ಪೋಷಕರು ಭಾರತೀಯ ಮೂಲದವರಾಗಿದ್ದು, ಅಮೆರಿಕಕ್ಕೆ ವಲಸೆ ಹೋಗಿದ್ದರು.

ಇಸ್ರೇಲ್ ರಾಯಭಾರ ಕಚೇರಿ ಸ್ಥಳಾಂತರ ಸಮರ್ಥಿಸಿಕೊಂಡ ಹ್ಯಾಲೆ
ಇದೇ ವೇಳೆ ತಾವು ವಿಶ್ವಸಂಸ್ಥೆ ರಾಯಭಾರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಇಸ್ರೇಲ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ನೂತನ ವಿಶ್ವಸಂಸ್ಥೆ ರಾಯಭಾರಿ ನಿಕ್ಕಿ ಹ್ಯಾಲೆ  ಸಮರ್ಥಿಸಿಕೊಂಡಿದ್ದಾರೆ. ಮಧ್ಯ ಪ್ರಾಚ್ಯದಲ್ಲಿ ಸಂಭವಿಸುತ್ತಿರುವ ಹಿಂಸಾಚಾರದಿಂದಾಗಿ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸುವುದು ಉತ್ತಮ ಎಂಬ ಅಭಿಪ್ರಾಯಗಳು ಅರಬ್ ಮುಖಂಡರಿಂದ ಬಂದಿತ್ತು. ಹೀಗಾಗಿ  ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ನಿಕ್ಕಿ ಹ್ಯಾಲೆ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com