ಕಾಶ್ಮೀರ ವಿಚಾರದಲ್ಲಿ 'ಮಧ್ಯವರ್ತಿ' ಪಾತ್ರ ನಿರ್ವಹಿಸಲು ಸಿದ್ಧ: ಪಾಕಿಸ್ತಾನ

ಕಾಶ್ಮೀರ ವಿಚಾರದಲ್ಲಿ ಮತ್ತೆ ಮೂಗು ತೂರಿಸಲು ಮುಂದಾಗಿರುವ ಪಾಕಿಸ್ತಾನ, ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಸಿದ್ಧವೆಂದು ಶುಕ್ರವಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಕಾಶ್ಮೀರ ವಿಚಾರದಲ್ಲಿ ಮತ್ತೆ ಮೂಗು ತೂರಿಸಲು ಮುಂದಾಗಿರುವ ಪಾಕಿಸ್ತಾನ, ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಸಿದ್ಧವೆಂದು ಶುಕ್ರವಾರ ಹೇಳಿಕೊಂಡಿದೆ.

ಈ ಕುರಿತಂತೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಜಕಾರಿಯಾ ಅವರು, ಕಾಶ್ಮೀರ ಸಮಸ್ಯೆ ಬಗೆಹರಿಕೆಗಾಗಿ ಪಾಕಿಸ್ತಾನ ಸದಾಕಾಲ ಸಿದ್ಧವಿದ್ದು, ಈ ವಿಚಾರದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಲು ಸಿದ್ಧವಿದೆ ಎಂದು ಹೇಳಿಕೊಂಡಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಕಾಶ್ಮೀರ ಸಮಸ್ಯೆ ಹಲವು ವರ್ಷಗಳಿಂದಲೂ ಇದ್ದು, ವಿಶ್ವ ಸಮುದಾಯದಲ್ಲಿ ಇದೊಂದು ದೊಡ್ಡ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕೆಲ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ನಿಷೇಧ ಹೇರಿರುವ ಟ್ರಂಪ್ ಅವರ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಉಗ್ರವಾದ ಒಂದು ಸಮುದಾಯಕ್ಕೆ ಸೇರಿದೆ ಎಂದು ಹೇಳುವುದು ಸರಿಯಲ್ಲ. ಭತ್ಪಾದಕರಿಗೆ ಧರ್ಮ, ನಂಬಿಗೆ, ಜಾತಿ, ಬಣ, ವರ್ಣ ಹಾಗೂ ಜನಾಂಗೀಯತೆ ಯಾವುದೂ ಇಲ್ಲ ಎಂಬುದನ್ನು ನಾವು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ.

ಭಯೋತ್ಪಾದನೆ ಎಂಬುದು ಇಂದು ವಿಶ್ವಕ್ಕೆ ಎದುರಾಗಿರುವ ಪಿಡುಗಾಗಿದ್ದು, ಇದನ್ನು ತೊಲಗಿಸಲು ವಿಶ್ವ ಸಮುದಾಯ ಒಟ್ಟಾಗಿ ಕೈಜೋಡಿಸಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com