ಜಿ20 ಶೃಂಗಸಭೆ ವಿರೋಧಿಸಿ ಭಾರೀ ಪ್ರತಿಭಟನೆ; 76 ಪೊಲೀಸರಿಗೆ ಗಾಯ

ಜಿ20 ಶೃಂಗಸಭೆಯನ್ನು ವಿರೋಧಿಸಿ ಹಂಬರ್ಗ್ ನಲ್ಲಿ ಪ್ರತಿಭಟನೆಗಳನ್ನು ಜೋರಾಗಿದ್ದು ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನದಲ್ಲಿ 76 ಪೊಲೀಸರು...
ಹ್ಯಾಂಬರ್ಗ್ ನಲ್ಲಿ ಪ್ರತಿಭಟನೆ
ಹ್ಯಾಂಬರ್ಗ್ ನಲ್ಲಿ ಪ್ರತಿಭಟನೆ
ಹ್ಯಾಂಬರ್ಗ್: ಜಿ20 ಶೃಂಗಸಭೆಯನ್ನು ವಿರೋಧಿಸಿ ಹ್ಯಾಂಬರ್ಗ್ ನಲ್ಲಿ ಪ್ರತಿಭಟನೆಗಳನ್ನು ಜೋರಾಗಿದ್ದು ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನದಲ್ಲಿ 76 ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಸಾವಿರಾರು ಸಂಖೆಯಲ್ಲಿ ನೆರದಿದ್ದ ಪ್ರತಿಭಟನಾಕಾರರು ನರಕಕ್ಕೆ ಆಗಮನ ಎಂದು ಘೋಷಣೆಗಳನ್ನು ಕೂಗುತ್ತಿದ್ದಂತೆ ಹಿಂಸಾಚಾರ ಆರಂಭವಾಯಿತು. ಕೆಲ ಮುಸುಕುಧಾರಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಟಲ್ ಮತ್ತು ಕಲ್ಲುಗಳನ್ನು ತೂರಿದ್ದರ ಪರಿಣಾಮ ಪೊಲೀಸರು ಗಾಯಗೊಂಡಿದ್ದಾರೆ ಎಂದು ಜರ್ಮನ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
ಜಾಗತೀಕರಣ ವಿರೋಧಿಸಿ ಹ್ಯಾಂಬರ್ಗ್ ನಲ್ಲಿ ಸರಿಸುಮಾರು 12 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆ ನಿಲ್ಲಿಸುವಂತೆ ಪೊಲೀಸರು ಮೈಕ್ ನಲ್ಲಿ ಘೋಷಿಸಿದರು. ಇದನ್ನು ಪ್ರತಿಭಟನಾಕಾರರು ನಿರ್ಲಕ್ಷಿಸಿದರು. ನಂತರ ಪೊಲೀಸರ ವಿರುದ್ಧ ಕೆಲ ಮುಸುಕುಧಾರಿಗಳು ಬಾಟಲ್ ಮತ್ತು ಕಲ್ಲುಗಳನ್ನು ತೂರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com