ಮನೆ ಮಾಲೀಕ ನಿದ್ದೆಯಲ್ಲಿದ್ದಾಗ ಒಳನುಗ್ಗಿದ ಕರಡಿ, ಫ್ರಿಡ್ಜ್ ನಲ್ಲಿದ್ದ ಆಹಾರ ಬೇಟೆ!

ಮನೆಯ ಮಾಲಿಕ ನಿದ್ದೆಯಲ್ಲಿದ್ದಾಗ ಒಳನುಗ್ಗಿದ ಕರಡಿಯೊಂದು ಫ್ರಿಡ್ಜ್ ನಲ್ಲಿದ್ದ ಆಹಾರವನ್ನು ಬೇಟೆಯಾಡಿದ ಘಟನೆ ಅಮೆರಿಕಾದ ಕೊಲೊರಾಡೋದಲ್ಲಿ ನಡೆದಿದೆ.
ಕರಡಿ
ಕರಡಿ
ಕೊಲೊರಾಡೋ: ಮನೆಯ ಮಾಲಿಕ ನಿದ್ದೆಯಲ್ಲಿದ್ದಾಗ ಒಳನುಗ್ಗಿದ ಕರಡಿಯೊಂದು ಫ್ರಿಡ್ಜ್ ನಲ್ಲಿದ್ದ ಆಹಾರವನ್ನು ಬೇಟೆಯಾಡಿದ ಘಟನೆ ಅಮೆರಿಕಾದ ಕೊಲೊರಾಡೋದಲ್ಲಿ ನಡೆದಿದೆ. 
ಕೊಲೋರಾಡೊ ಸ್ಪಿಂಗ್ಸ್ ಗೆಜೆಟ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಮನೆಯ ಮಾಲಿಕ ಮಹಡಿಯಲ್ಲಿ ಮಲಗಿರಬೇಕಾದರೆ ಮನೆಯೊಳಗೆ ನುಗ್ಗಿರುವ ಕರಡಿ ಅಡುಗೆ ಕೋಣೆಯಲ್ಲಿ ಸುಮಾರು 6 ಗಂಟೆಗಳಷ್ಟು ಕಾಲ ಇದ್ದು, ಫ್ರಿಡ್ಜ್ ನಲ್ಲಿ ಆಹಾರಕ್ಕಾಗಿ ಹುಡುಕಿದೆ.
ಮನೆಯೊಳಗೆ ನುಗ್ಗಿದ ಕರಡಿ ಫ್ರಿಡ್ಜ್ ಬಾಗಿಲು ತೆರೆದು ಆಹಾರಕ್ಕಾಗಿ ಹುಡುಕುತ್ತಿರುವುದು ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ನಂತರ ಅಧಿಕಾರಿಗಳು ಕರಡಿಯನ್ನು ಹತ್ಯೆ ಮಾಡಿದ್ದಾರೆ. ಇದೇ ಕರಡಿ ಜೂನ್ ನಲ್ಲಿಯೂ ಮನೆಯೊಂದಕ್ಕೆ ನುಗ್ಗಿ ಐಸ್ ಕ್ರೀಂ ಹಾಗೂ ಇನ್ನಿತರ ಪದಾರ್ಥಗಳನ್ನು ತಿಂದಿತ್ತು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com