ಉದ್ವಿಗ್ನ ಪರಿಸ್ಥಿತಿಯನ್ನು ತಗ್ಗಿಸಲು ನೇರ ಮತ್ತು ಮುಕ್ತ ಮಾತುಕತೆಯಲ್ಲಿ ತೊಡಗಿ: ಭಾರತ ಮತ್ತು ಚೀನಾಕ್ಕೆ ಅಮೆರಿಕಾ ಸಲಹೆ

ಹೇರಿಕೆಯ ಅಂಶಗಳನ್ನು ಬಿಟ್ಟು ಮುಕ್ತವಾಗಿ ಭಾರತ ಮತ್ತು ಚೀನಾ ನೇರ ಮಾತುಕತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಹೇರಿಕೆಯ ಅಂಶಗಳನ್ನು ಬಿಟ್ಟು ಮುಕ್ತವಾಗಿ ಭಾರತ ಮತ್ತು ಚೀನಾ ನೇರ ಮಾತುಕತೆ ನಡೆಸಬೇಕೆಂದು ಅಮೆರಿಕಾ ಹೇಳಿದೆ.
ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣವನ್ನು ಕಡಿಮೆ ಮಾಡಲು ಹೇರಿಕೆಯ ಅಂಶಗಳನ್ನು ಬಿಟ್ಟು ಮುಕ್ತವಾಗಿ ಭಾರತ ಮತ್ತು ಚೀನಾ ನೇರ ಮಾತುಕತೆಯನ್ನು ಪ್ರೋತ್ಸಾಹಿಸುತ್ತೇವೆ ಎಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ರಕ್ಷಣಾ ಇಲಾಖೆ ವಕ್ತಾರ ಗ್ಯಾರಿ ರಾಸ್ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದೊಂದು ವಾರದಲ್ಲಿ ಅಮೆರಿಕಾ ರಕ್ಷಣಾ ಇಲಾಖೆ ಕೂಡ   ಇಂತಹ ಹೇಳಿಕೆ ನೀಡುತ್ತಿದೆ. ಆದರೆ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿಯನ್ನು ಕಡಿಮೆ ಮಾಡಲು ಮುಕ್ತ ನೇರ ಮಾತುಕತೆಯನ್ನು ಅದು ಉತ್ತೇಜಿಸುತ್ತದೆ.
ಈ ಮಧ್ಯೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಈ ತಿಂಗಳಾಂತ್ಯಕ್ಕೆ ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಲು ಬೀಜಿಂಗ್ ಗೆ ತೆರಳಲಿದ್ದಾರೆ.
ಅವರು ತಮ್ಮ  ಭೇಟಿ ಸಂದರ್ಭದಲ್ಲಿ ಚೀನಾದ ಭದ್ರತಾ ಸಲಹೆಗಾರರ ಜೊತೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ತನ್ನ ಹೇಳಿಕೆ ಬಗ್ಗೆ ಅಧಿಕೃತ ಮಾಹಿತಿ ನೀಡಲು ಅಮೆರಿಕ ನಿರಾಕರಿಸಿದೆ. ಹೆಚ್ಚಿನ ಮಾಹಿತಿಗೆ ಭಾರತ ಮತ್ತು ಚೀನಾ ಸರ್ಕಾರವನ್ನು ಸಂಪರ್ಕಿಸುವಂತೆ ಅದು ಹೇಳಿದೆ. ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಕಡಿಮೆ ಮಾಡಲು ಮುಕ್ತ ನೇರ ಮಾತುಕತೆಗೆ ಭಾರತ ಮತ್ತು ಚೀನಾ ಮುಂದಾಗಲು ನಾವು ಬಯಸುತ್ತೇವೆ. ಈ ಬಗ್ಗೆ ಯಾವುದೇ ಊಹಾಪೋಹಗಳಿಲ್ಲ ಎಂದು ರಾಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com