ಪರ್ವತವನ್ನು ಮೆಟ್ಟಿ ನಿಲ್ಲಬಹುದು, ಆದರೆ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನಲ್ಲ: ಭಾರತಕ್ಕೆ ಚೀನಾ ಎಚ್ಚರಿಕೆ

ದಿನ ಕಳೆದಂತೆ ಚೀನಾ-ಭಾರತದ ನಡುವಿನ ಡೊಕ್ಲಾಮ್ ಗಡಿ ಬಿಕ್ಕಟ್ಟು ಜಟಿಲಗೊಳ್ಳುತ್ತಿದ್ದು, ಈ ಬಾರಿ ಚೀನಾದ ರಕ್ಷಣಾ ಇಲಾಖೆಯ ವಕ್ತಾರರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. .
ಭಾರತ-ಚೀನಾ(ಸಂಗ್ರಹ ಚಿತ್ರ)
ಭಾರತ-ಚೀನಾ(ಸಂಗ್ರಹ ಚಿತ್ರ)
ಬೀಜಿಂಗ್: ದಿನ ಕಳೆದಂತೆ ಚೀನಾ-ಭಾರತದ ನಡುವಿನ ಡೊಕ್ಲಾಮ್ ಗಡಿ ಬಿಕ್ಕಟ್ಟು ಜಟಿಲಗೊಳ್ಳುತ್ತಿದ್ದು, ಈ ಬಾರಿ ಚೀನಾದ ರಕ್ಷಣಾ ಇಲಾಖೆಯ ವಕ್ತಾರರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. .
"ತನ್ನ ಪ್ರದೇಶವನ್ನು ರಕ್ಷಿಸಿಕೊಳ್ಳಲು ಚೀನಾದ ಸೇನೆಗೆ ಇರುವ ಸಾಮರ್ಥ್ಯದ ಬಗ್ಗೆ ಭಾರತ ಭ್ರಮೆಗೆ ಆಸ್ಪದ ನೀಡಬಾರದು" ಎಂದು ಚೀನಾದ ರಕ್ಷಣಾ ಇಲಾಖೆಯ ವಕ್ತಾರರು ಎಚ್ಚರಿಸಿದ್ದಾರೆ. ಸಿಕ್ಕಿಂ ನಲ್ಲಿರುವ ಡೋಕ್ಲಾಮ್ ಗಡಿಯಲ್ಲಿ ಭಾರತ-ಚೀನಾ ಸೇನೆಯ ಯೋಧರು ಮುಖಾಮುಖಿಯಾಗಿದ್ದು, ಭಾರತ ಡೊಕ್ಲಾಮ್ ಪ್ರದೇಶದಲ್ಲಿ ನಿಯೋಜಿಸಿರುವ ಸೇನಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಕಳೆದ ಒಂದು ತಿಂಗಳಿನಿಂದ ಚೀನಾ ಆಗ್ರಹಿಸುತ್ತಿದೆ. 
ಗಡಿ ಬಿಕ್ಕಟ್ಟಿನ ಬಗ್ಗೆ ಮುಂದುವರೆದು ಮಾತನಾಡಿರುವ ಚೀನಾದ ರಕ್ಷಣಾ ಇಲಾಖೆಯ ವಕ್ತಾರ, ಪರ್ವತವನ್ನು ಅಲುಗಾಡಿಸುವುದು ಸುಲಭವಿರಬಹುದು, ಆದರೆ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ಅಲುಗಾಡಿಸುವುದು ಕಷ್ಟ, ಹಾಗಾಗಿ ಭಾರತ ಚೀನಾ ಸೇನೆಯ ಸಾಮರ್ಥ್ಯದ ಬಗ್ಗೆ ಭ್ರಮೆಯಲ್ಲಿರುವುದು ಬೇಡ ಎಂದು ಹೇಳಿದ್ದಾರೆ. 
ಡೋಕ್ಲಾಮ್ ಪ್ರದೇಶದಿಂದ ಭಾರತ ತನ್ನ ಸೇನಾ ಪಡೆ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಂಡರೆ ಗಡಿ ವಿವಾದ ತಣ್ಣಗಾಗುತ್ತದೆ ಎಂದು ಹೇಳುತ್ತಿರುವ ಚೀನಾ ಈಗ, ಭಾರತ ಚೀನಾಗೆ ಸಂಬಂಧಿಸಿದ ವಿಷಯಗಳನ್ನು ಅದೃಷ್ಟಕ್ಕೆ ಬಿಟ್ಟು ಭ್ರಮೆಯಲ್ಲಿರಬಾರದು ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com