ಮದುವೆಯಾದ ಒಂದೇ ವಾರದಲ್ಲಿ ಆತ್ಮಹತ್ಯೆಗೆ ಯತ್ನಸಿದ್ದ ರಾಣಿ ಡಯಾನಾ!
ಲಂಡನ್: ಪ್ರಿನ್ಸ್ ಚಾರ್ಲ್ಸ್ ರೊಂದಿಗೆ ಮದುವೆಯಾದ ವಾರದಲ್ಲೇ ರಾಣಿ ಡಯಾನಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ರಹಸ್ಯ ಮಾಹಿತಿಯೊಂದು ಇದೀಗ ಸೋರಿಕೆಯಾಗಿದೆ.
ಇಂಗ್ಲೆಂಡ್ ರಾಜಮನೆತನದ ಅದ್ದೂರಿ ಮದುವೆ ಎಂದೇ ಕರೆಯಲಾಗುವ ಪ್ರಿನ್ಸ್ ಚಾರ್ಲ್ಸ್ ಹಾಗೂ ರಾಣಿ ಡಯಾನಾ ಮದುವೆ ವ್ಯಾಪಕ ಸುದ್ದಿಯಾಗಿತ್ತು. ಆದರೆ ಮದುವೆಯಾದ ಕೇವಲ ಒಂದು ವಾರದ ಅವಧಿಯೊಳಗೇ ರಾಣಿ ಡಯಾನಾ ತಮ್ಮ ಕೈಯಲ್ಲಿನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಇದೀಗ ಬಯಲಾಗಿದೆ. 1991ರಲ್ಲಿ ಸ್ನೇಹಿತನೊಬ್ಬನ ನೆರವಿನೊಂದಿಗೆ ಡಯಾನಾ ಆತ್ಮಹತ್ಯಾ ಟೇಪ್ ಮುದ್ರಿಸಿದ್ದರು ಎಂದು ಹೇಳಲಾಗುತ್ತಿದೆ.
ಸರಿ ಸುಮಾರು 20 ವರ್ಷಗಳ ಕಾಲ ಈ ಟೇಪ್ ಅನ್ನು ಗೌಪ್ಯವಾಗಿಡಲಾಗಿತ್ತು. ಬಳಿಕ ಈ ಟೇಪ್ ಅನ್ನು ಆ್ಯಂಡ್ರ್ಯೂ ಮೋರ್ಟಾನರ ಡಯಾನಾ ಕತೆಯಲ್ಲಿ ಮರು ಪ್ರಕಟಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಿನ್ಸ್ ಚಾರ್ಲ್ಸ್ ಮತ್ತು ಆತನ ಪ್ರೇಯಸಿ ಕ್ಯಾಮಿಲಾರ ಸಂಬಂಧದಿಂದಾಗಿ ಡಯಾನಾ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದೂ ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ