ಭೀಕರ ದೃಶ್ಯ: ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯನ್ನು ಜೀವಂತ ಕಚ್ಚಿತಿಂದ 12 ಬೀದಿ ನಾಯಿಗಳು

ರಷ್ಯಾದ ಸೋವೆಟ್ ಕ್ಸೀ ಪ್ರಾಂತ್ಯದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರ ಮೇಲೆ 12 ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ತಿಂದಿರುವ ಭಯಾನಕ ಘಟನೆ ನಡೆದಿದೆ...
ನಾಯಿಗಳ ದಾಳಿ ವಿಡಿಯೋ
ನಾಯಿಗಳ ದಾಳಿ ವಿಡಿಯೋ
ಮಾಸ್ಕೋ: ರಷ್ಯಾದ ಸೋವೆಟ್ ಕ್ಸೀ ಪ್ರಾಂತ್ಯದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರ ಮೇಲೆ 12 ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ತಿಂದಿರುವ ಭಯಾನಕ ಘಟನೆ ನಡೆದಿದೆ. 
ಸೆಕ್ಯೂರಿಟಿ ಗಾರ್ಡ್ ಆಗಿದ್ದ ಆತ ದಿನಂಪ್ರತಿ ನಾಯಿಗಳಿಗೆ ಆಹಾರ ಹಾಕುತ್ತಿದ್ದರು. ಆದರೆ ಅಂದು ಆತ ಆಹಾರ ತಂದಿರಲಿಲ್ಲ. ಆತ ಬಂದಿದ್ದನ್ನು ಗಮನಿಸಿದ ನಾಯಿಗಳು ಆತನನ್ನು ಹಿಂಬಾಲಿಸಿಕೊಂಡು ಬಂದಿವೆ. ಆತ ಆಹಾರ ಹಾಕಿದ್ದರಿಂದ ನಾಯಿಗಳು ಆತನ ಮೇಲೆ ಮುಗಿಬಿದ್ದಿವೆ. 
ಹಿಂಡು ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಆತ ಎರಡು ಮೂರು ಬಾರಿ ಎಂದು ಹೋಗಲು ಪ್ರಯತ್ನಿಸಿದ್ದ ಆದರೆ ಮದ್ಯದ ಅಮಲಿನಲ್ಲಿದ್ದರಿಂದ ಎಡವಿ ಕೆಳಗೆ ಬೀಳುತ್ತಿದ್ದ ಇದರಿಂದ ನಾಯಿಗಳು ಒಟ್ಟಿಗೆ ಆತನ ಮೇಲೆ ದಾಳಿ ತಿಂದು ಹಾಕಿವೆ. 
12 ನಾಯಿಗಳು ಒಟ್ಟಾಗಿ ದಾಳಿ ಮಾಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದಾಗ ಭಯಾನಕ ಘಟನೆ ಬೆಳಕಿಗೆ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com