ಪಾಕಿಸ್ತಾನಕ್ಕೆ ಬರೆ, ಭಾರತಕ್ಕೆ ಜಯ; ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್ ಜಾಗತಿಕ ಉಗ್ರ!

ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟ ಜಾಗತಿಕ ಮಟ್ಟದಲ್ಲಿ ಮತ್ತೊಂದು ಯಶ ಸಿಕ್ಕಿದ್ದು, ಪಾಕಿಸ್ತಾನ ಪ್ರಾಯೋಜಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್ ನನ್ನು ಜಾಗತಿಕ ಉಗ್ರ ಎಂದು ಅಮೆರಿಕ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ವಾಷಿಂಗ್ಟನ್‌: ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟ ಜಾಗತಿಕ ಮಟ್ಟದಲ್ಲಿ ಮತ್ತೊಂದು ಯಶ ಸಿಕ್ಕಿದ್ದು, ಪಾಕಿಸ್ತಾನ ಪ್ರಾಯೋಜಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ  ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್ ನನ್ನು ಜಾಗತಿಕ ಉಗ್ರ ಎಂದು ಅಮೆರಿಕ ಘೋಷಣೆ ಮಾಡಿದೆ.

ಪ್ರಸ್ತುತ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದು, ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಭೇಟಿಗೂ ಕೆಲವೇ ಗಂಟೆಗಳ ಮೊದಲು ಅಮೆರಿಕ ಸರ್ಕಾರ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ. ಅಮೆರಿಕ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಮೂಲದ ಸಲಾವುದ್ದೀನ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿರುವುದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ಪ್ರಮುಖ ಗೆಲುವು ಎಂದು ಭಾವಿಸಲಾಗುತ್ತಿದೆ.

ಅಮೆರಿಕ ಸರ್ಕಾರದ ಈ ನಿಲುವು, ಜಮ್ಮು ಮತ್ತು ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ನೇರವಾಗಿಯೇ ಬೆಂಬಲ ನೀಡುತ್ತಿರುವ ಮತ್ತು ಉಗ್ರ ಸಂಘಟನೆಗಳಿಗೆ ಪರೋಕ್ಷ ನೆರವು ನೀಡುತ್ತಿರುವ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದ ಕಪಾಳ ಮೋಕ್ಷ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಮೆರಿಕ ಸರ್ಕಾರದ ಈ ಕ್ರಮವನ್ನು ಭಾರತ ಮುಕ್ತ ಕಂಠದಿಂದ ಸ್ವಾಗತಿಸಿದೆ.

ಇಷ್ಟಕ್ಕೂ ಯಾರು ಈ ಸಲಾಹುದ್ದೀನ್‌?
ಪಾಕಿಸ್ತಾನ ಪ್ರಾಯೋಜಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥನೇ ಈ ಸೈಯ್ಯದ್ ಸಲಾಹುದ್ದೀನ್. ಕಾಶ್ಮೀರದ ಬುದ್ಗಾಂ ಜಿಲ್ಲೆಯವನಾದ ಸಲಾಹುದ್ದೀನ್‌ ಕಾಶ್ಮೀರ ವಿವಿಯಲ್ಲಿ ಓದುವ ವೇಳೆ ಮತೀಯವಾದಿಗಳ ಜೊತೆ ಗುರುತಿಸಿಕೊಂಡಿದ್ದ. ನಂತರ 1987ರಲ್ಲಿ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದ. ನಂತರ ರಾಜ್ಯದಲ್ಲಿ ನಡೆದ ಹಲವು ಹಿಂಸಾಚಾರ ಪ್ರಕರಣಗಳಲ್ಲಿ ಬಂಧಿತನಾಗಿ ಬಿಡುಗಡೆಗೊಂಡ ಬಳಿಕ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆ ಸೇರಿಕೊಂಡಿದ್ದ. ಬಳಿಕ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದಲೇ ಕಾಶ್ಮೀರದಲ್ಲಿ ಹಿಂಸಾಕೃತ್ಯಗಳನ್ನು ನಡೆಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ. ರಾಜ್ಯದಲ್ಲಿ ಕಳೆದ 2 ದಶಕಗಳಲ್ಲಿ ನಡೆದ ಹಲವು ಹಿಂಸಾಚಾರ ಪ್ರಕರಣಗಳಲ್ಲಿ ಈತನದ್ದೇ ಪ್ರಮುಖ ಕೈವಾಡವಿತ್ತು ಎಂದು ಪೊಲೀಸ್ ದಾಖಲೆಗಳು ಸ್ಪಷ್ಟ ಪಡಿಸಿವೆ.

ಜಾಗತಿಕ ಉಗ್ರ ಎಂದು ಘೋಷಣೆ ಮಾಡಿದರೆ ಭಾರತಕ್ಕೆ ಆಗುವ ಲಾಭ?
ಅಮೆರಿಕ ಸರ್ಕಾರ ಸಲಾಹುದ್ದೀನ್‌ನನ್ನು ಘೋಷಿತ ಉಗ್ರ ಎಂದು ಪ್ರಕಟಿಸುವ ಮೂಲಕ ಆತ ಮತ್ತು ಆತನ ಸಂಘಟನೆಯನ್ನು ಏಕಾಂಗಿಯಾಗಿ ಮಾಡುವ ಯತ್ನ ನಡೆಸಿದೆ. ಅಲ್ಲದೆ ಈ ಘೋಷಣೆ ಬಳಿಕ ಅಮೆರಿಕದ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಈತನೊಂದಿಗೆ ಯಾವುದೇ ನಂಟು ಹೊಂದುವುದು ಅಪರಾಧವಾಗಲಿದೆ. ಅಮೆರಿಕ ಹಣಕಾಸು ವ್ಯವಸ್ಥೆಗಳು ಈತನಿಗೆ ಲಭ್ಯವಿರುವುದಿಲ್ಲ. ಜೊತೆಗೆ ಅಮೆರಿಕದಲ್ಲಿ ಈತ ಹೊಂದಿರಬಹುದಾದ ಯಾವುದೇ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com