ಭಾರತ ಅಶಿಸ್ತಿನ ದೇಶ, ನಿಯಮಗಳ ಪಾಠ ಕಲಿಸಬೇಕಿದೆ: ಚೀನಾ

ಗಡಿ ಪ್ರದೇಶ ಅತಿಕ್ರಮಣ ಮಾಡಿರುವ ಸಂಬಂಧ ಭಾರತ-ಚೀನಾ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಚೀನಾದ ಪತ್ರಿಕೆ ಭಾರತವನ್ನು ಅಶಿಸ್ತಿನ ದೇಶ ಎಂದು ಕರೆದಿದ್ದು, ನಿಯಮಗಳನ್ನು ಕಲಿಸಬೇಕಿದೆ ಎಂದು ಬರೆದಿದೆ.
ಚೀನಾ
ಚೀನಾ
ನವದೆಹಲಿ: ಗಡಿ ಪ್ರದೇಶ ಅತಿಕ್ರಮಣ ಮಾಡಿರುವ ಸಂಬಂಧ ಭಾರತ-ಚೀನಾ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಚೀನಾದ ಪತ್ರಿಕೆ ಭಾರತವನ್ನು ಅಶಿಸ್ತಿನ ದೇಶ ಎಂದು ಕರೆದಿದ್ದು, ನಿಯಮಗಳನ್ನು ಕಲಿಸಬೇಕಿದೆ ಎಂದು ಬರೆದಿದೆ. 
ಸರ್ಕಾರಿ ಸ್ವಾಮ್ಯದ ಚೀನಾದ ಗ್ಲೋಬಲ್ ಟೈಮ್ಸ್ ಭಾರತದ ಬಗ್ಗೆ ಲೇಖನ ಪ್ರಕಟಿಸಿದ್ದು, ಅಮೆರಿಕ ಹಾಗೂ ಪಶ್ಚಿಮದ ಪ್ರಭಾವಿ ರಾಷ್ಟ್ರಗಳು ಭಾರತವನ್ನು ಚೀನಾಗೆ ಪರ್ಯಾಯವಾಗಿ ಓಲೈಕೆ ಮಾಡುತ್ತಿವೆ. ಈ ಬೆಂಬಲದಿಂದ ಭಾರತ ತಾನು ಕಾರ್ಯತಂತ್ರದ ದೃಷ್ಟಿಯಿಂದ ಶ್ರೇಷ್ಠ ಎಂದು ಬೀಗುತ್ತಿದೆ. ಅಷ್ಟೇ ಅಲ್ಲದೇ ಜಿಡಿಪಿ ವಿಷಯದಲ್ಲಿ ವಿಶ್ವದಲ್ಲಿಯೇ 5 ನೇ ರಾಷ್ಟ್ರವಾಗಿದೆ. ಆದರೆ ರಾಷ್ಟ್ರೀಯ ಶಕ್ತಿಯೈ ವಿಷಯದಲ್ಲಿ ಭಾರತ ಚೀನಗಿಂತ ಹಿಂದುಳಿದಿದೆ ಎಂಬುದನ್ನು ಮರೆಯಬಾರದು ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ಎಚ್ಚರಿಸಿದ್ದು, ಗಡಿಯ ವಿಷಯದಲ್ಲಿ ಚೀನಾವನ್ನು ಎದುರುಹಾಕಿಕೊಳ್ಳಲು ಭಾರತಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ. 
ಗಡಿ ವಿವಾದವನ್ನು ಉಲ್ಬಣಗೊಳಿಸುವುದನ್ನು ಚೀನಾ ಸಾಧ್ಯವಾದಷ್ಟು ತಡೆಯುತ್ತದೆ.ಆದರೆ ಭಾರತ ಅಶಿಸ್ತಿನ ದೇಶವಾಗಿದ್ದು, ನಿಯಮಗಳನ್ನು ಈ ಬಾರಿ ಕಲಿಸಬೇಕಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. ಸಿಕ್ಕೀಂ ನ ಗಡಿ ಪ್ರದೇಶದಲ್ಲಿ ಗಡಿ ಅತಿಕ್ರಮಣ ಮಾಡಲಾಗಿದೆ ಎಂದು ಭಾರತ-ಚೀನಾ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com