ಡಬ್ಬಲ್ ಡಕ್ಕರ್ ಬಸ್ ಗುದ್ದಿದರೂ ಏನೂ ಆಗಲೇ ಇಲ್ಲ ಎಂಬಂತೆ ಎದ್ದು ಬಾರ್ ಗೆ ಹೋದ ವ್ಯಕ್ತಿ!

ರಸ್ತೆ ಅಪಘಾತದಲ್ಲಿ ಕೂದಲೆಳೆ ಅಂಚಿನಲ್ಲಿ ಪಾರಾದ ವ್ಯಕ್ತಿ ಏನೂ ಆಗೇ ಇಲ್ಲ ಎಂಬಂತೆ ಪಕ್ಕದಲ್ಲೇ ಇದ್ದ ಬಾರ್/ಪಬ್ ಗೆ ತೆರಳಿರುವ ಘಟನೆ ಬ್ರಿಟನ್ ನಲ್ಲಿ ನಡೆದಿದೆ.
ಅಪಘಾತ
ಅಪಘಾತ
Updated on
ಬ್ರಿಟನ್: ರಸ್ತೆ ಅಪಘಾತದಲ್ಲಿ ಕೂದಲೆಳೆ ಅಂಚಿನಲ್ಲಿ ಪಾರಾದ ವ್ಯಕ್ತಿ ಏನೂ ಆಗೇ ಇಲ್ಲ ಎಂಬಂತೆ ಪಕ್ಕದಲ್ಲೇ ಇದ್ದ ಬಾರ್/ಪಬ್ ಗೆ ತೆರಳಿರುವ ಘಟನೆ ಬ್ರಿಟನ್ ನಲ್ಲಿ ನಡೆದಿದೆ. 
ವೇಗವಾಗಿ ಬಂದ ಡಬ್ಬಲ್ ಡಕ್ಕರ್ ಬಸ್ ಸಿಮೋನ್ ಸ್ಮಿತ್ (53) ಎಂಬ ಪಾದಾಚಾರಿಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಕೂದಲೆಳೆ ಅಂಚಿನಲ್ಲಿ ಪಾರಾಗಿದ್ದಾನೆ. ಆದರೆ ತಕ್ಷಣವೇ ತನಗೆ ಏನೂ ಆಗೇ ಇಲ್ಲ ಎಂಬಂತೆ ಪಕ್ಕದಲ್ಲೇ ಇದ್ದ ಪಬ್ ಗೆ ತೆರಳಿದ್ದಾನೆ. 
ಡಬ್ಬಲ್ ಡಕ್ಕರ್ ಬಸ್ ನಲ್ಲಿದ್ದ ಕೆಲವರು ಯಾರಿಗೆ ಡಿಕ್ಕಿ ಹೊಡೆದಿದೆ ಎಂದು ನೋಡಲು ಬಸ್ ನಿಂದ ಕೆಳಗಿಳಿದು ಬಂದು ನೋಡಿದರೆ ಅಲ್ಲಿ ಯಾರೂ ಕಾಣಲಿಲ್ಲ. ಈ ಘಟನೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದ್ದು, ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com