ಬೀಜಿಂಗ್: ಸಿಕ್ಕಿಂ ಸೆಕ್ಟರ್ ನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸಬೇಕು ಎಂದು ಗುರುವಾರ ಚೀನಾ ಹೇಳಿದೆ. ಅಲ್ಲದೆ ಡೊಂಕ್ಲಮ್ ನಲ್ಲಿ ನಿಯೋಜಿಸಿರುವ ಸೇನೆಯನ್ನು ಭಾರತ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಸಿಕ್ಕಿಂ ಗಡಿ ವಿವಾದವನ್ನು ಭಾರತ ಮತ್ತು ಚೀನಾ ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹರಿಸೊಳ್ಳಬೇಕು. ಆ ಪ್ರದೇಶದಲ್ಲಿ ವಿವಾದ ರಹಿತ ಸಾರ್ವಭೌಮತ್ವವನ್ನು ಚೀನಾ ಬಯಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಅವರು ಹೇಳಿದ್ದಾರೆ.
ಸಿಕ್ಕಿಂ ಸೆಕ್ಟರ್ ನ ಡೊಂಕ್ಲಮ್ ಪ್ರದೇಶದಿಂದ ಭಾರತೀಯ ಸೇನೆ ಹಿಂದೆ ಸರಿದರೆ ಗಡಿ ಸಮಸ್ಯೆಯನ್ನು ಅರ್ಥಪೂರ್ಣ ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದು ಎಂದು ಕಾಂಗ್ ತಿಳಿಸಿದ್ದಾರೆ.
ಡೊಂಕ್ಲಮ್ ಪ್ರದೇಶದಲ್ಲಿ ಭಾರತೀಯ ಸೇನೆ ಅಕ್ರಮವಾಗಿ ಒಳನುಸುಳಿರುವ ಫೋಟೋಗಳು ತಮ್ಮ ಬಳಿ ಇವೆ ಎಂದು ಲು ಕಾಂಗ್ ಅವರು ಹೇಳಿದ್ದಾರೆ.