ಗುಂಡಿಟ್ಟು ಮಾಜಿ ಪತ್ನಿಯ ಗಂಡನ ಹತ್ಯೆ: ಇಂಡೋ-ಅಮೆರಿಕನ್ ವ್ಯಕ್ತಿ ಬಂಧನ

ಮಾಜಿ ಪತ್ನಿ ಗಂಡನನ್ನು ಗುಂಡಿಟ್ಟು ಹತ್ಯೆ ಮಾಡಿದ ಆರೋಪದ ಮೇಲೆ ಇಂಡೋ-ಅಮೆರಿಕನ್ ವ್ಯಕ್ತಿಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ...
ಗುಂಡಿನ ದಾಳಿ
ಗುಂಡಿನ ದಾಳಿ
ಹೌಸ್ಟನ್: ಮಾಜಿ ಪತ್ನಿ ಗಂಡನನ್ನು ಗುಂಡಿಟ್ಟು ಹತ್ಯೆ ಮಾಡಿದ ಆರೋಪದ ಮೇಲೆ ಇಂಡೋ-ಅಮೆರಿಕನ್ ವ್ಯಕ್ತಿಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. 
41 ವರ್ಷದ ಸಯನ್ತಾನ್ ಘೋಸ್ ಬಂಧಿತ ವ್ಯಕ್ತಿ. ಬುಧವಾರ ಘೋಸ್ ಮಾಜಿ ಪತ್ನಿ ಮನೆಗೆ ತೆರಳಿದ್ದು ಅಲ್ಲಿ ಆಕೆ ಮತ್ತು ಆಕೆಯ ಗಂಡನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ದಂಪತಿಗಳು ಸಾವನ್ನಪ್ಪಿದ್ದು ಹತ್ಯೆ ಆರೋಪದ ಮೇಲೆ ಕಳೆದ ರಾತ್ರಿ ಘೋಸ್ ನನ್ನು ನ್ಯೂ ಮೆಕ್ಸಿಕೋದಲ್ಲಿ ಬಂಧಿಸಿದ್ದಾರೆ. 
ಬಂಧಿತ ಆರೋಪಿ ಸಯನ್ತಾನ್ ಘೋಸ್ ಮಾಜಿ ಪತ್ನಿಯ ನಿವಾಸದ ಬಳಿ ಪಾರ್ಟಿ ಮಾಡುತ್ತಿದ್ದು ಈ ವೇಳೆ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಕೊನೆಗೆ ಘೋಸ್ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಮಾಜಿ ಪತ್ನಿ ಅಮಂದ ಹ್ಯಾರಿಸ್ ಮತ್ತು ಆಕೆಯ ಪತಿ 43 ವರ್ಷದ ಕ್ಲಾರೆನ್ಸ್ ವೇಯ್ನ್ ಹ್ಯಾರಿಸ್ ಹಲವು ಬಾರಿ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಲ್ಲಿ ಹ್ಯಾರಿಸ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅಮಂದ ಹ್ಯಾರಿಸ್ ಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಪೊಲೀಸ್ ಮೂಲಗಳಿಂದ ಅಮಂದ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com