ಅಮೆರಿಕ: ಹೆಚ್-1 ಬಿ ವೀಸಾಗೆ ಸಂಬಂಧಿಸಿದ ಹಲವು ಮಸೂದೆಗಳಲ್ಲಿ ಬದಲಾವಣೆ

ಅಮೆರಿಕಾದ ಉದ್ಯೋಗಗಳಿಗೆ ಕತ್ತರಿ ಹಾಕುವ ಭಾರತೀಯ ಐಟಿ ಸಂಸ್ಥೆಗಳ ಪಾಲಿಗೆ ಮುಖ್ಯವಾಗಿರುವ ಹೆಚ್-1 ಬಿ ವೀಸಾಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಆಡಳಿತ ಸುಧಾರಣೆಗಳಿಗೆ ಮುಂದಾಗಿದೆ.
ಹೆಚ್-1ಬಿ ವೀಸಾ
ಹೆಚ್-1ಬಿ ವೀಸಾ
ವಾಷಿಂಗ್ ಟನ್: ಅಮೆರಿಕಾದ ಉದ್ಯೋಗಗಳಿಗೆ ಕತ್ತರಿ ಹಾಕುವ ಭಾರತೀಯ ಐಟಿ ಸಂಸ್ಥೆಗಳ ಪಾಲಿಗೆ ಮುಖ್ಯವಾಗಿರುವ ಹೆಚ್-1 ಬಿ ವೀಸಾಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಆಡಳಿತ ಸುಧಾರಣೆಗಳಿಗೆ ಮುಂದಾಗಿದೆ. 
ಹೆಚ್-1 ಬಿ ವೀಸಾ ಸುಧಾರಣೆಗಳಿಗೆ ಪೂರಕವಾಗಿ ಸೆನೆಟ್ ಹಾಗೂ ಯುಎಸ್ ನ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನಲ್ಲಿ ಈಗಾಗಲೇ ಬರೊಬ್ಬರಿ 12 ಮಸೂದೆಗಳನ್ನು ಮಂಡಿಸಲಾಗಿದ್ದು, ಲಾಟರಿ ವ್ಯವಸ್ಥೆಯನ್ನು ತ್ವರಿತವಾಗಿ ರದ್ದುಗೊಳಿಸುವಿದಕ್ಕೆ ಶಿಫಾರಸ್ಸು ಮಾಡಿದೆ. ಮಂಡಿಸಲಾಗಿರುವ ಮಸೂದೆಯ ಪ್ರಕಾರ 50 ಉದ್ಯೋಗಿಗಳಿರುವ ಸಂಸ್ಥೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹೆಚ್-1ಬಿ ಅಥವಾ ಎಲ್-1 ವೀಸಾ ಹೊಂದಿರುವವರಿದ್ದರೆ ಅಂತಹ ಕಂಪನಿಗಳು ಹೆಚ್ಚುವರಿ ಹೆಚ್-1 ಬಿ ವೀಸಾ ಪಡೆದಿರುವ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೆ ನಿರ್ಬಂಧ ಇರಲಿದೆ. 
ಪ್ರಸ್ತಾವಿತ ಮಸೂದೆ ಪ್ರಮುಖವಾಗಿ ಅಮೆರಿಕಾದ ಕೆಲಸಗಾರರ ಬದಲಿಗೆ ಹೆಚ್-1 ಬಿ ವೀಸಾ ಅಥವಾ ಎಲ್-1 ವೀಸಾ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವುದರಿಂದ ನಿರ್ಬಂಧವನ್ನು ಶಿಫಾರಸ್ಸು ಮಾಡಿದೆ. ಕೌಶಲ ಮತ್ತು ವೇತನ ಆಧಾರಿತ ವ್ಯವಸ್ಥೆಯಡಿ ಹೆಚ್-1 ಬಿ ವೀಸಾ ನೀಡುವುದಕ್ಕೆ ಸಂಬಂಧಿಸಿದ ಮತ್ತೊಂದು ಮಸೂದೆ ಹೆಚ್-1 ಬಿ ವೀಸಾ ಪಡೆಯುವುದಕ್ಕೆ ಕನಿಷ್ಠ ವೇತನ ಮಿತಿಯನ್ನು 130,000 ಡಾಲರ್ ಗೆ ನಿಗದಿಪಡಿಸಿದೆ. ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಭಾರತೀಯ ಐಟಿ ಕ್ಷೇತ್ರಕ್ಕೆ ಅಘಾತ ಉಂಟಾಗಿದ್ದು, ಐಟಿ ಉದ್ಯೋಗಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com