ಫೇಸ್ ಬುಕ್ ಬಳಸಿ ತಲೆಮರೆಸಿಕೊಂಡಿದ್ದ ಅಪರಾಧಿ ಬಂಧಿಸಿದ ಇಟಲಿ ಪೊಲೀಸರು

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಇಟಲಿ ಪೊಲೀಸರು ಫೇಸ್ ಬುಕ್ ಬಳಸಿ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೆಕ್ಸಿಕೋ ಸಿಟಿ: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಇಟಲಿ ಪೊಲೀಸರು ಫೇಸ್ ಬುಕ್ ಬಳಸಿ ಬಂಧಿಸಿದ್ದಾರೆ.
ಟೆಲೆಗ್ರಾಫ್ ವರದಿಯ ಪ್ರಕಾರ, ಪೊಲೀಸರಿಗೆ ಬೇಕಾಗಿದ್ದ 65 ವರ್ಷದ ಗ್ವಿಲಿಯೋ ಪೆರಾನ್, ಸೇವರಿಯೊ ಗಾರ್ಸಿಯಾ ಎಂಬ ಹೆಸರಿನಲ್ಲಿ ಕಳೆದ ಶನಿವಾರ ಫೇಸ್ ಬುಕ್ ಫೋಟೋ ಹಾಕಿ, ಹ್ಯಾಪಿ ಮ್ಯಾನ್ ದಕ್ಷಿಣ ಗಡಿಯಲ್ಲಿ ವಾಸಿಸುತ್ತಿರುವುದಾಗಿ ಸ್ಟೇಟಸ್ ಹಾಕಿಕೊಂಡಿದ್ದ. 
ಡ್ರಗ್ಸ್ ಕಳ್ಳಸಾಗಣೆಯಲ್ಲಿ ತಪ್ಪಿತಸ್ಥತನಾಗಿದ್ದ ಫೆರಾನ್ ಕಳೆದ ಎರಡು ದಶಕಗಳಿಂದ ಕಾನೂನು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದ.
ಪೆರಾನ್, ಸೇವರಿಯೊ ಗಾರ್ಸಿಯಾ ಅಲಿಯಾಸ್ ಗಲೇರಿಯೊ ಎಂಬ ಹೆಸರಿನಲ್ಲಿ ಫೇಸ್ ಬುಕ್ ಬಳಸುತ್ತಿದ್ದ. ಗಲೇರಿಯೋ ಆತನ ತಾಯಿ ಹೆಸರಾಗಿದ್ದು, ಇದರ ಜಾಡು ಹಿಡಿದು ಪೊಲೀಸರು ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com