ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ, ಅಲ್ಲಿನ ಸೈನಿಕರು ಕ್ರಿಮಿನಲ್'ಗಳು: ಬಲೂಚ್ ನಾಯಕ

2 ಭಾರತೀಯ ಯೋಧರ ಶಿರಚ್ಛೇದ ಮಾಡಿರುವ ಪಾಕಿಸ್ತಾನದ ಪೈಶಾಚಿಕ ಕೃತ್ಯಕ್ಕೆ ಬಲೂಚಿಸ್ತಾನದ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ...
ಬಲೂಚಿಸ್ತಾನ ನಾಯಕ ಮೆಹ್ರಾನ್ ಮರ್ರಿ
ಬಲೂಚಿಸ್ತಾನ ನಾಯಕ ಮೆಹ್ರಾನ್ ಮರ್ರಿ
ವಿಶ್ವಸಂಸ್ಥೆ: 2 ಭಾರತೀಯ ಯೋಧರ ಶಿರಚ್ಛೇದ ಮಾಡಿರುವ ಪಾಕಿಸ್ತಾನದ ಪೈಶಾಚಿಕ ಕೃತ್ಯಕ್ಕೆ ಬಲೂಚಿಸ್ತಾನದ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. 
ಪೈಶಾಚಿಕ ಕೃತ್ಯ ಕುರಿತಂತೆ ವಿಶ್ವಸಂಸ್ಥೆ ಜೊತೆಗೆ ಮಾತನಾಡಿರುವ ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗದಲ್ಲಿ ಬಲೂಚಿಸ್ತಾನೀ ಸಮುದಾಯದ ಪ್ರತಿನಿಧಿಯಾಗಿರುವ ಮೆಹ್ರಾನ್ ಮರ್ರಿ ಅವರು, ಅನಾಗರೀಕರು ಹಾಗೂ ಕ್ರಿಮಿನಲ್ ಆಲೋಚನೆಯುಳ್ಳ ಮನಸ್ಥಿತಿಯುಳ್ಳವರು ಎಂಬುದನ್ನು ಪಾಕಿಸ್ತಾನ ಸೇನೆ ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಹೇಳಿದ್ದಾರೆ. 
ಪಾಕಿಸ್ತಾನ ಭಯೋತ್ಪಾದರ ರಾಷ್ಟ್ರ. ಬಲೂಚಿಸ್ತಾನದಲ್ಲಿ ಕಳೆದ 70 ವರ್ಷಗಳಿಂದಲೂ ಇಂತಹದ್ದೇ ದುಷ್ಕೃತ್ಯಗಳನ್ನು ಪಾಕಿಸ್ತಾನ ಮಾಡುತ್ತಲೇ ಇದೆ ಎಂದು ತಿಳಿಸಿದ್ದಾರೆ. 
ನಿನ್ನೆಯಷ್ಟೇ ಅಂತರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನ, ಗಸ್ತು ತಿರುಗುತ್ತಿದ್ದ ಇಬ್ಬರು ಯೋಧರನ್ನು ತುಂಡರಿಸಿ ಪೈಶಾಚಿತ ಕೃತ್ಯವೆಸಗಿತ್ತು. ದಾಳಿಯಲ್ಲಿ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ ಪರಮ್ಜಿತ್ ಸಿಂಗ್ ಹಾಗೂ ಬಿಎಸ್ಎಫ್ ಮುಖ್ಯಪೇದೆ ಪ್ರೇಮ್ ಸಾಗರ್ ಹುತಾತ್ಮರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com