ಚೀನಾದ ವೀಚಾಟ್ ಆ್ಯಪ್ ಗೆ ರಷ್ಯಾ ನಿರ್ಬಂಧ!

ಚೀನಾದ ಖ್ಯಾತ ಸಂದೇಶ ವಿನಿಮಯ ತಂತ್ರಾಂಶ ‘ವೀಚಾಟ್‌’ ಆ್ಯಪ್‌ ನ್ನು ರಷ್ಯಾದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ನಿರ್ಬಂಧಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೋ: ಚೀನಾದ ಖ್ಯಾತ ಸಂದೇಶ ವಿನಿಮಯ ತಂತ್ರಾಂಶ ‘ವೀಚಾಟ್‌’ ಆ್ಯಪ್‌ ನ್ನು ರಷ್ಯಾದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ನಿರ್ಬಂಧಿಸಿದೆ ಎಂದು ತಿಳಿದುಬಂದಿದೆ.

ರಷ್ಯಾದ ಅಂತರ್ಜಾಲ ಕಾಯ್ದೆಯ ನಿಬಂಧನೆಗಳನ್ನು ಪಾಲಿಸುವಲ್ಲಿ ಚೀನಾದ ವೀಚಾಟ್‌’ ಆ್ಯಪ್‌ ವಿಫಲಗೊಂಡಿರುವ ಹಿನ್ನಲೆಯಲ್ಲಿ ತಂತ್ರಾಂಶವನ್ನು ನಿರ್ಭಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚೀನಾದ ಸೌತ್   ಮಾರ್ನಿಂಗ್ ಪೋಸ್ಟ್ ವರದಿ ಮಾಡಿದ್ದು, ರಷ್ಯಾದ ಸಮೂಹ ಮಾಧ್ಯಮಗಳ ನಿಯಂತ್ರಣ ಸಂಸ್ಥೆಯು ವೀಚಾಟ್‌ನ್ನು ನಿರ್ಬಂಧ ಪಟ್ಟಿಗೆ ಸೇರಿಸಿದೆ ಎಂದು ಹೇಳಿದೆ.

ಖ್ಯಾತ ತಂತ್ರಾಂಶ ಅಭಿವೃದ್ಧಿ ಸಂಸ್ಥೆ ಟೆನ್‌ಸೆಂಟ್‌ ಟೆಕ್ನಾಲಜಿಸ್‌ ವೀಚಾಟ್ ಅನ್ನು ಅಭಿವೃದ್ಧಿ ಪಡಿಸಿದ್ದು, 2011ರಲ್ಲಿ ಮಾರುಕಟ್ಟೆಗೆ ತಂತ್ರಾಂಶ ಬಿಡುಗಡೆಯಾಗಿತ್ತು. ಚೀನಾದಲ್ಲಿ ಫೇಸ್ ಬುಕ್, ಟ್ವಿಟರ್ ಮತ್ತು ಗೂಗಲ್ ಸೇರಿದಂತೆ  ವಿದೇಶಿ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದ್ದು, ವೀಚಾಟ್ ಬಳಕೆ ಗಣನೀಯವಾಗಿ ಹೆಚ್ಚಳವಾಗಿದೆ. 2016ರ ಕೊನೆಗೆ ಚೀನಾದಲ್ಲಿ ವೀಚಾಟ್‌ ಬಳಕೆದಾರರ ಸಂಖ್ಯೆ 88.9 ಕೋಟಿ ತಲುಪಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com