ಟ್ರಂಪ್ ಸರ್ಕಾರಕ್ಕೆ ಮತ್ತೋರ್ವ ಇಂಡೋ-ಅಮೆರಿಕನ್ ಸೇರ್ಪಡೆ!

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದಲ್ಲಿ ಮತ್ತೋರ್ವ ಭಾರತ ಮೂಲದ ವ್ಯಕ್ತಿ ಸೇರ್ಪಡೆಯಾಗಿದ್ದು, ಇಂಧನ ನಿಯಂತ್ರಣ ಆಯೋಗದ ಮುಖ್ಯಸ್ಥರಾಗಿ ಭಾರತ ಮೂಲದ ನೀಲ್ ಚಟರ್ಜಿ ಅವರನ್ನು ನೇಮಕಗೊಳಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದಲ್ಲಿ ಮತ್ತೋರ್ವ ಭಾರತ ಮೂಲದ ವ್ಯಕ್ತಿ ಸೇರ್ಪಡೆಯಾಗಿದ್ದು, ಇಂಧನ ನಿಯಂತ್ರಣ ಆಯೋಗದ ಮುಖ್ಯಸ್ಥರಾಗಿ ಭಾರತ ಮೂಲದ ನೀಲ್ ಚಟರ್ಜಿ  ಅವರನ್ನು ನೇಮಕಗೊಳಿಸಲಾಗಿದೆ.

ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರದ ಇಂಧನ ನೀತಿ ಸುಧಾರಣೆ ಮತ್ತು ನೀತಿ ರಚನೆಗೆ ಸಂಬಂಧಿಸಿದಂತೆ ನೀಲ್ ಚಟರ್ಜಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. 40 ವರ್ಷ ವಯಸ್ಸಿನ ನೀಲ್ ಚಟರ್ಜಿ  ಕೆಂಟುಕಿಯ ಲೆಕ್ಸಿಂಗ್ಟನ್ ನಲ್ಲಿ ಜನಿಸಿದ್ದು, ಭಾರತ ಮೂಲದ ಅವರ ತಂದೆ-ತಾಯಿ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೀಲ್ ಚಟರ್ಜಿ ಅವರಿಗೆ ವಿವಾಹವಾಗಿದ್ದು, ಇಬ್ಬರು ಪುತ್ರರು ಹಾಗೂ ಓರ್ವ  ಪುತ್ರಿ ಇದ್ದಾಳೆ ಎಂದು ತಿಳಿದುಬಂದಿದೆ.

ಇನ್ನು ಇಂಧನ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲಿರುವ ನೀಲ್ ಚಟರ್ಜಿ ಮುಂದೆ ಹಲವು ಸವಾಲುಗಳಿದ್ದು, ಕೆನಡಾದಿಂದ ಟೆಕ್ಸಾಸ್ ಗೆ ಪೈಪ್ ಲೈನ್ ಮೂಲಕ ಕಚ್ಛಾತೈಲ ರವಾನಿಸುವ ಯೋಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ವಿವಾದಿತ ಈ ಯೋಜನೆಗೆ ಈ ಹಿಂದೆ ಬರಾಕ್ ಒಬಾಮ ನೇತೃತ್ವದ ಸರ್ಕಾರ ತಡೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com