ಅಮೆರಿಕ: ಶೂಟೌಟ್ ವೇಳೆ ಪೊಲೀಸ್ ಅಧಿಕಾರಿ ಪ್ರಾಣ ಉಳಿಸಿ ಹಿರೋ ಆದ ನಾಯಿ

ಬಾಂಬ್ ಪತ್ತೆ ದಳದ ನಾಯಿಯೊಂದು ಶೂಟೌಟ್ ನಡೆಯುತ್ತಿದ್ದ ವೇಳೆ ತಾನು ಬುಲೆಟ್ ಗೆ ಎದೆಯೊಡ್ಡಿ ತನ್ನ ಪೊಲೀಸ್...
ಗಾಯಗೊಂಡ ಹಿರೋ ನಾಯಿ ಕೆ9 ಕಾಸ್ಪರ್
ಗಾಯಗೊಂಡ ಹಿರೋ ನಾಯಿ ಕೆ9 ಕಾಸ್ಪರ್
ಹೂಸ್ಟನ್: ಬಾಂಬ್ ಪತ್ತೆ ದಳದ ನಾಯಿಯೊಂದು ಶೂಟೌಟ್ ನಡೆಯುತ್ತಿದ್ದ ವೇಳೆ ತಾನು ಬುಲೆಟ್ ಗೆ ಎದೆಯೊಡ್ಡಿ ತನ್ನ ಪೊಲೀಸ್ ಅಧಿಕಾರಿಯ ಪ್ರಾಣ ಉಳಿಸಿ ಹೀರೋ ಆಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭದ್ರತಾ ಪಡೆಯಲ್ಲಿದ್ದ ಪೊಲೀಸ್ ನಾಯಿ ಕೆ9 ಕಾಸ್ಪರ್ ಪಲ್ಮ್ ಬೀಚ್ ಶೆರೀಫ್ ಕಚೇರಿ ಬಳಿ ನಡೆದ ಗುಂಡಿನ ಕಾಳಗದ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದೆ.
ಕಳೆದ ಶುಕ್ರವಾರ ಗುಂಡಿನ ದಾಳಿ ಮತ್ತ ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಫಲಿಪ್ ಒಶೇಯಾ ಹಾಗೂ ಪೊಲೀಸರ ನಡುವೆ ಫ್ಲೋರಿಡಾದ ಜುಪಿಟರ್ ನಲ್ಲಿ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಒಶೇಯಾನನ್ನು ಹತ್ಯೆ ಮಾಡಲಾಗಿದೆ.
ಗುಂಡಿನ ದಾಳಿ ವೇಳೆ ತನ್ನ ಅಧಿಕಾರಿಯನ್ನು ರಕ್ಷಿಸಲು ಹೋದ ಕೆ9 ಕಾಸ್ಪರ್ ಗೆ ಗುಂಡು ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದೆ ಎಂದು ಶೇರಿಫ್ ಕಚೇರಿ ಫೇಸ್ ಬುಕ್ ನಲ್ಲಿ ತಿಳಿಸಿದೆ. ಅಲ್ಲದೆ ಗಾಯಗೊಂಡ ನಾಯಿಯ ಫೋಟೋವನ್ನು ಪ್ರಕಟಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com