ಭಾರತ ಪರಮಾಣು ವಸ್ತುಗಳನ್ನು ಶಸ್ತ್ರಾಸ್ತ್ರ ತಯಾರಿಕೆಗೆ ಬಳಸುತ್ತಿದೆ: ಪಾಕಿಸ್ತಾನ ಆರೋಪ

ರಾಷ್ಟ್ರೀಯ ಭದ್ರತಾ ಗುಂಪಿನ ಮನ್ನಾ ಯೋಜನೆಯಡಿ ಶಾಂತಿಯುತ ಉದ್ದೇಶಗಳಿಗಾಗಿ ಪಡೆದುಕೊಂಡ...
ಪಾಕಿಸ್ತಾನ ವಿದೇಶಾಂಗ ಸಚಿವಾಲಯ ವಕ್ತಾರ ನಫೀಸ್ ಝಕಾರಿಯಾ
ಪಾಕಿಸ್ತಾನ ವಿದೇಶಾಂಗ ಸಚಿವಾಲಯ ವಕ್ತಾರ ನಫೀಸ್ ಝಕಾರಿಯಾ
ಇಸ್ಲಾಮಾಬಾದ್:  ರಾಷ್ಟ್ರೀಯ ಭದ್ರತಾ ಗುಂಪಿನ ಮನ್ನಾ ಯೋಜನೆಯಡಿ ಶಾಂತಿಯುತ ಉದ್ದೇಶಗಳಿಗಾಗಿ ಪಡೆದುಕೊಂಡ ಪರಮಾಣು ವಸ್ತುಗಳನ್ನು ಶಸ್ತ್ರಾಸ್ತ್ರಗಳ  ತಯಾರಿಗೆ ಭಾರತ ಬದಲಾಯಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ನಿನ್ನೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ವಿದೇಶಾಂಗ ಇಲಾಖೆ ವಕ್ತಾರ ನಫೀಸ್ ಝಕಾರಿಯಾ, ಆಮದು ಮಾಡಿಕೊಂಡ ಪರಮಾಣು ಇಂಧನಗಳನ್ನು ಭಾರತ ಬದಲಾಯಿಸುವ  ಅಪಾಯವನ್ನು ಪಾಕಿಸ್ತಾನ ಹಲವು ದಶಕಗಳಿಂದ ಹಿನ್ನಡೆಯನ್ನು ಅನುಭವಿಸಿಕೊಂಡು ಬಂದಿದೆ.  ಈ ಪರಮಾಣು ಶಸ್ತ್ರಾಸ್ತ್ರವನ್ನು ಪರಮಾಣು ಸಹಕಾರ ಒಪ್ಪಂದ ಮತ್ತು 2008ರ ಪರಮಾಣು ಪೂರೈಕೆ ಗುಂಪು ಮನ್ನಾ ಒಪ್ಪಂದದಡಿಯಲ್ಲಿ ಖರೀದಿಸಲಾಗಿತ್ತು.
ಭಾರತದ ಪರಮಾಣು  ಕಾರ್ಯಕ್ರಮ   ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ ಎಂಬುದು ನಿರ್ಲಕ್ಷಿಸಲ್ಪಟ್ಟ ಸತ್ಯ ಎಂದು ಮಾಧ್ಯಮ ವರದಿಗಳು ಮತ್ತು ದಾಖಲೆಗಳು ಪುಷ್ಟೀಕರಿಸುತ್ತವೆ.
ಹಾರ್ವರ್ಡ್ ಕೆನ್ನೆಡಿ ಶಾಲೆ ಇತ್ತೀಚೆಗೆ ಬಿಡುಗಡೆ ಮಾಡಿರುವ  ದಾಖಲೆಗಳ ಪ್ರಕಾರ, ಭಾರತ ಖರೀದಿಸಿಕೊಂಡ ಪರಮಾಣು ವಸ್ತುಗಳು ಆತಂಕಕಾರಿ ಎಂದು ವರದಿ ನೀಡಿತ್ತು ಎಂದಿದೆ.
ಭಾರತ 2,600ಕ್ಕೂ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ ಎಂದು ಇತ್ತೀಚಿನ ಬೆಲ್ಫರ್ ಪೇಪರ್ ವರದಿ ಮಾಡಿದೆ ಎಂದು ನಫೀಸ್ ಝಕಾರಿಯಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com