

ವಾಷಿಂಗ್ಟನ್: ಇತ್ತ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಅತ್ತ ಅಮೆರಿಕ ದೇಶ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸೇನಾ ಆರ್ಥಿಕ ನೆರವಿನ ಪ್ರಮಾಣದಲ್ಲಿ ಭಾರಿ ಪ್ರಮಾಣದ ಕಡಿತಗೊಳಿಸಿದೆ.
ಮೂಲಗಳ ಪ್ರಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವಿನಲ್ಲಿ ಅಮೆರಿಕ 1229 ಕೋಟಿ ರು. (190 ಮಿಲಿಯನ್ ಡಾಲರ್) ಕಡಿತ ಮಾಡಿದೆ ಎಂದು ತಿಳಿದುಬಂದಿದೆ. 2016ರ ಬಜೆಟ್ ನಲ್ಲಿ 3455 ಕೋಟಿ ರು. (534 ಮಿಲಿಯನ್ ಡಾಲರ್) ಹಾಗೂ ವಿದೇಶಿ ಸೇನಾ ನಿಧಿಯಿಂದ 1455 ಕೋಟಿ ರು. (225 ಮಿಲಿಯನ್ ಡಾಲರ್) ಆರ್ಥಿಕ ಸಹಾಯವನ್ನು ಅಮೆರಿಕ ಒದಗಿಸಿತ್ತು.
2017ರ ಬಜೆಟ್ ನಲ್ಲಿ ಪಾಕ್ ಗೆ 2225 ಕೋಟಿ ರೂ. (344 ಕೋಟಿ ಮಿಲಿಯನ್ ಡಾಲರ್) ಮತ್ತು ವಿದೇಶಿ ಸೇನಾ ನಿಧಿಯಿಂದ 647 ಕೋಟಿ ರೂ. (100 ಮಿಲಿಯನ್ ಡಾಲರ್) ನೆರವು ಘೊಷಿಸಿದೆ ಎಂದು ತಿಳಿದುಬಂದಿದೆ. ಆ ಮೂಲಕ ಅಮೆರಿಕದಿಂದ ಬರುತ್ತಿದ್ದ ಆರ್ಥಿಕ ನೆರವಿನಲ್ಲಿ ಪಾಕಿಸ್ತಾನ ಭಾರಿ ಪ್ರಮಾಣದ ಖೋತಾ ಆಗಿದೆ.