ಸಂಗೀತಗಾರ, ಗೀತೆ ಬರಹಗಾರ ಗ್ರೆಗ್ ಅಲ್ಮಾನ್ ನಿಧನ

ಅಮೆರಿಕಾದ ಪ್ರಖ್ಯಾತ ಸಂಗೀತಗಾರ, ಹಾಡುಗಾರ ಮತ್ತು ಗೀತೆ ಬರಹಗಾರ, ಅಲ್ಮನ್ ಬ್ರದರ್ಸ್...
ಗ್ರೆಗ್ ಅಲ್ಮನ್
ಗ್ರೆಗ್ ಅಲ್ಮನ್
ವಾಷಿಂಗ್ಟನ್: ಅಮೆರಿಕಾದ ಪ್ರಖ್ಯಾತ ಸಂಗೀತಗಾರ, ಹಾಡುಗಾರ ಮತ್ತು ಗೀತೆ ಬರಹಗಾರ, ಅಲ್ಮನ್ ಬ್ರದರ್ಸ್ ಬ್ಯಾಂಡ್ ನ ಸಹ ಸಂಸ್ಥಾಪಕ ಗ್ರೆಗೊರಿ ಲೆನೊಯ್ರ್ ಅಲ್ಲ್ಮ್ಯಾನ್ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಜಾರ್ಜಿಯಾದ  ಸವನ್ನಾದಲ್ಲಿರುವ ಅವರ ನಿವಾಸದಲ್ಲಿ ಅಲ್ಮ್ಯಾನ್ ನಿಧನರಾಗಿದ್ದಾರೆ ಎಂದು ಅವರ ವೆಬ್ ಸೈಟ್ ನಲ್ಲಿ ನೀಡಲಾದ ಮಾಹಿತಿಯಿಂದ ತಿಳಿದುಬಂದಿದೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಕಳೆದ ಅನೇಕ ವರ್ಷಗಳಿಂದ ಅವರು ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವೆಬ್ ಸೈಟ್ ನಲ್ಲಿ ಮಾಹಿತಿ ದೊರಕಿದೆ.
ಕೀಬೋರ್ಡ್ ಮತ್ತು ಗಿಟಾರ್ ನುಡಿಸುತ್ತಿದ್ದ ಅಲ್ಲ್ಮ್ಯಾನ್ ಗೆ 1999ರಲ್ಲಿ ಹೆಪಟೈಟಿಸ್ ಸಿ ಇದೆ ಎಂದು ಗೊತ್ತಾಗಿತ್ತು. 2010ರಲ್ಲಿ ಲಿವರ್ ಟ್ರಾನ್ಪ್ಲ್ಯಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಬಿಲ್ ಬೋರ್ಡ್ ತನ್ನ ವೆಬ್ ಸೈಟ್ ನಲ್ಲಿ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com