ಸಂಗ್ರಹ ಚಿತ್ರ
ವಿದೇಶ
ಅತ್ತೆಯ ಮೇಲಿನ ಕೋಪವನ್ನು ಅಮಾಯಕರ ಮೇಲೆ ತೀರಿಸಿಕೊಂಡನೇ ಟೆಕ್ಸಾಸ್ ದಾಳಿ ಕೋರ!
ಬರೊಬ್ಬರಿ 27 ಮಂದಿಯ ಸಾವಿಗೆ ಕಾರಣವಾದ ಟೆಕ್ಸಾಸ್ ದಾಳಿಯ ಹಿಂದೆ ಜನಾಂಗೀಯ ಧ್ವೇಷವಲ್ಲ ಬದಲಿಗೆ, ಕೌಟುಂಬಿಕ ಅಸಮಾಧಾನವಿತ್ತು ಎಂಬ ಕುತೂಹಲಕಾರಿ ಅಂಶವನ್ನು ಟೆಕ್ಸಾಸ್ ತನಿಖಾಧಾರಿಗಳು ವ್ಯಕ್ತಪಡಿಸಿದ್ದಾರೆ.
ಟೆಕ್ಸಾಸ್: ಬರೊಬ್ಬರಿ 27 ಮಂದಿಯ ಸಾವಿಗೆ ಕಾರಣವಾದ ಟೆಕ್ಸಾಸ್ ದಾಳಿಯ ಹಿಂದೆ ಜನಾಂಗೀಯ ಧ್ವೇಷವಲ್ಲ ಬದಲಿಗೆ, ಕೌಟುಂಬಿಕ ಅಸಮಾಧಾನವಿತ್ತು ಎಂಬ ಕುತೂಹಲಕಾರಿ ಅಂಶವನ್ನು ಟೆಕ್ಸಾಸ್ ತನಿಖಾಧಾರಿಗಳು ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಟೆಕ್ಸಾಸ್ ಬ್ಯಾಪ್ಟಿಸ್ಟ್ ಚರ್ಚ್ ಗೆ ನುಗ್ಗಿದ್ದ ದಾಳಿ ಕೋರ ತನ್ನ ಅಸಾಲ್ಟ್ ರೈಫಲ್ ನಿಂದ ಮನಸೋ ಇಚ್ಛೆ ಗುಂಡು ಹಾರಿಸಿ 27 ಮಂದಿಯ ಸಾವಿಗೆ ಕಾರಣವಾಗಿದ್ದು. ಈ ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಹಲವು ಕುತೂಹಲಕಾರಿ ಮಾಹಿತಿಗಳು ಲಭ್ಯವಾಗುತ್ತಿದ್ದು, ದಾಳಿಕೋರ ದಾಳಿಗೂ ಮುನ್ನ ತನ್ನ ಅತ್ತೆಯೊಂದಿಗೆ ಜಗಳ ಮಾಡಿಕೊಂಡಿದ್ದನಂತೆ. ಅದರ ಕೋಪವನ್ನು ಬಹುಶಃ ಚರ್ಚ್ ನಲ್ಲಿದ್ದ ಅಮಾಯಕರ ಮೇಲೆ ತೀರಿಸಿಕೊಂಡಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ದಾಳಿ ನಡೆಸಿದ ವ್ಯಕ್ತಯನ್ನು 26 ವರ್ಷದ ಡೆವಿನ್ ಪ್ಯಾಟ್ರಿಕ್ ಕೆಲ್ಲಿ ಎಂದು ಗುರುತಿಸಲಾಗಿದ್ದು, ಅಧಿಕಾರಿಗಳು ತಿಳಿಸಿರುವಂತೆ ಕೆವಿನ್ ಅತ್ತೆ ಇದೇ ಬ್ಯಾಪ್ಟಿಸ್ಟ್ ಚರ್ಚ್ ಗೆ ಆಗಾಗ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ತೆರಳುತ್ತಿದ್ದರಂತೆ. ಆದರೆ ದಾಳಿ ವೇಳೆ ಆಕೆ ಚರ್ಚ್ ನಲ್ಲಿ ಇರಲಿಲ್ಲ. ಬದಲಿಗೆ ಆಕೆಯ ತಾಯಿ ಇಲ್ಲಿದ್ದರಂತೆ. ದಾಳಿಗೂ ಮುನ್ನ ತನ್ನ ಅತ್ತೆಯನ್ನು ಕೊಲ್ಲುವುದಾಗಿ ಕೆವಿನ್ ಮೊಬೈಲ್ ಸಂದೇಶ ರವಾನಿಸಿದ್ದನಂತೆ. ಬಳಿಕ ಚರ್ಚ್ ಮೇಲೆ ದಾಳಿ ಮಾಡಿ ತನ್ನ ಅತ್ತೆಯ ತಾಯಿಯೂ ಸೇರಿದಂತೆ ಆಕೆಯ ಹಲವು ಸ್ನೇಹಿತರನ್ನು ಕೊಂದು ಹಾಕಿದ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಒಟ್ಟಾರೆ ಕೌಟುಂಬಿಕ ಕಲಹವೊಂದು 27 ಮಂದಿ ಅಮಾಯಕರ ಪ್ರಾಣಕ್ಕೆ ಎರವಾಗಿದ್ದು ಮಾತ್ರ ದುರಂತವೇ ಸರಿ...

