ಭಾರತ-ಅಮೆರಿಕ ಆಂತರಿಕ ಅಭಿವೃದ್ಧಿಗಾಗಿ ಕೆಲಸ ಮಾಡಲಿವೆ: ಇವಾಂಕ ಟ್ರಂಪ್

ಭಾರತ ಮತ್ತು ಅಮೆರಿಕ ಆರ್ಥಿಕ ಅವಕಾಶಗಳನ್ನು ಹೆಚ್ಚಿಸಲು ಮತ್ತು ಆಂತರಿಕ ಅಭಿವೃದ್ಧಿಗಾಗಿ ಒಟ್ಟಿಗೆ ಕೆಲಸ ಮಾಡುವುದನ್ನು....
ಇವಾಂಕ ಟ್ರಂಪ್
ಇವಾಂಕ ಟ್ರಂಪ್
ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ಆರ್ಥಿಕ ಅವಕಾಶಗಳನ್ನು ಹೆಚ್ಚಿಸಲು ಮತ್ತು ಆಂತರಿಕ ಅಭಿವೃದ್ಧಿಗಾಗಿ ಒಟ್ಟಿಗೆ ಕೆಲಸ ಮಾಡುವುದನ್ನು ಮುಂದುವರೆಸಲಿವೆ ಎಂದು ಮುಂದಿನ ವಾರ ಹೈದರಾಬಾದ್ ಗೆ ಭೇಟಿ ನೀಡಿರುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಮತ್ತು ಅವರ ಸಲಹೆಗಾರ್ತಿ ಇವಾಂಕ ಟ್ರಂಪ್ ಅವರು ಹೇಳಿದ್ದಾರೆ.
36 ವರ್ಷದ ಇವಾಂಕ ಅವರು, ಅಮೆರಿಕದ ಉನ್ನತ ಅಧಿಕಾರಿಗಳು, ಮಹಿಳಾ ಉದ್ಯಮಿಗಳು ಹಾಗೂ ಉದ್ಯಮಿಗಳ ನಿಯೋಗದೊಂದಿಗೆ ನವೆಂಬರ್ 28ರಿಂದ ಹೈದರಾಬಾದ್ ನಲ್ಲಿ ಆರಂಭವಾಗಲಿರುವ ಮೂರು ದಿನಗಳ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ನನ್ನ ಭಾರತ ಭೇಟಿಯ ಕಡೆಗೆ ನಾನು ಹೆಚ್ಚು ಗಮನಹರಿಸುತ್ತಿದ್ದೇನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರನ್ನು ಮತ್ತೊಮ್ಮೆ ನೋಡುವ ಅವಕಾಶ ಸಿಕ್ಕಿದೆ ಎಂದು ಇವಾಂಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನವೆಂಬರ್ 28ರಂದು ಪ್ರಧಾನಿ ಮೋದಿ ಅವರು ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಗೆ ಚಾಲನೆ ನೀಡುತ್ತಿದ್ದು, ಈ ಶೃಂಗದಲ್ಲಿ ಸುಮಾರು 170 ದೇಶಗಳ 1,500 ಉದ್ಯಮಿಗಳು ಭಾಗವಹಿಸುತ್ತಿದ್ದಾರೆ. ಅಮೆರಿಕದಿಂದಲೇ ಸುಮಾರು 350 ಉದ್ಯಮಿಗಳು ಭಾಗವಹಿಸುತ್ತಿದ್ದು, ಈ ಪೈಕಿ ಭಾರತೀಯ-ಅಮೆರಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com