ಜಿಎಸ್ ಟಿ ಸಿದ್ಧತೆಯಲ್ಲಿದ್ದ ಕಾರಣ ಭಾರತದಲ್ಲಿ ಆರ್ಥಿಕ ಹಿನ್ನಡೆ: ವಿಶ್ವಬ್ಯಾಂಕ್

ನೋಟು ನಿಷೇಧ ಮತ್ತು ಜಿಎಸ್ ಟಿ ಜಾರಿ ಬಳಿಕ ಕುಂಠಿತವಾಗಿರುವ ಆರ್ಥಿಕ ಅಭಿವೃದ್ಧಿ ಕುರಿತಂತೆ ಭಾರತದ ಬೆಂಬಲಕ್ಕೆ ವಿಶ್ವಬ್ಯಾಂಕ್ ನಿಂತಿದ್ದು, ಭಾರತದ ಇತ್ತೀಚಿನ ಆರ್ಥಿಕ ಹಿನ್ನಡೆ ತಾತ್ಕಾಲಿಕವಷ್ಟೇ, ಶೀಘ್ರ ಸಹಜ ಸ್ಥಿತಿಗೆ ಮರಳಲಿದೆ ಎಂದು ಹೇಳಿದೆ.
ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ (ಸಂಗ್ರಹ ಚಿತ್ರ)
ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ (ಸಂಗ್ರಹ ಚಿತ್ರ)
ವಾಷಿಂಗ್ಟನ್: ನೋಟು ನಿಷೇಧ ಮತ್ತು ಜಿಎಸ್ ಟಿ ಜಾರಿ ಬಳಿಕ ಕುಂಠಿತವಾಗಿರುವ ಆರ್ಥಿಕ ಅಭಿವೃದ್ಧಿ ಕುರಿತಂತೆ ಭಾರತದ ಬೆಂಬಲಕ್ಕೆ ವಿಶ್ವಬ್ಯಾಂಕ್ ನಿಂತಿದ್ದು, ಭಾರತದ ಇತ್ತೀಚಿನ ಆರ್ಥಿಕ ಹಿನ್ನಡೆ ತಾತ್ಕಾಲಿಕವಷ್ಟೇ, ಶೀಘ್ರ  ಸಹಜ ಸ್ಥಿತಿಗೆ ಮರಳಲಿದೆ ಎಂದು ಹೇಳಿದೆ.
ಈ ಬಗ್ಗೆ ಐಎಂಎಫ್ ಮತ್ತು ವಿಶ್ವಬ್ಯಾಂಕಿನ ವಾರ್ಷಿಕ ಸಭೆಯ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರು, 'ಭಾರತದ ಇತ್ತೀಚಿನ ಆರ್ಥಿಕ ಹಿನ್ನಡೆ ಉನ್ಮಾದದ ಹಾಗೂ  ತಾತ್ಕಾಲಿಕ ಕ್ರಮ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಭಾರತ ಜಿಎಸ್‌ಟಿಗೆ ಸಿದ್ಧತೆಯಲ್ಲಿ ಇದ್ದ ಕಾರಣ ಆಗಿರುವ ಕೆಲವೊಂದು ವ್ಯತ್ಯಯಗಳಿಂದಾಗಿ ಈ ಹಿನ್ನಡೆ ಸಂಭವಿಸಬೇಕಾಗಿ ಬಂದಿದ್ದು, ಇದು ಕೆಲವೇ ತಿಂಗಳುಗಳಲ್ಲಿ  ಸರಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಭಾರತದ ಆರ್ಥಿಕ ಹಿನ್ನಡೆಗೆ ಜಿಎಸ್‌ ಟಿ ಮತ್ತು ನೋಟು ರದ್ದತಿ ಕಾರಣ ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಪತ್ರಕರ್ತರು ಐಎಂಎಫ್ ಅಧ್ಯಕ್ಷರ ಗಮನ ಸೆಳೆದ ಸಂದರ್ಭದಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ಅವರು, "ಭಾರತ ಜಾರಿಗೆ  ತಂದಿರುವ ಸರಕು ಮತ್ತು ಸೇವಾ ಕಾಯ್ದೆ ಭಾರತೀಯ ಆರ್ಥಿಕತೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಮೊದಲ ತ್ರೈಮಾಸಿಕದಲ್ಲಿ ಪ್ರಗತಿ ವೇಗ ಕುಸಿದಿದೆ ನಿಜ. ಆದರೆ ಇದಕ್ಕೆ ಜಿಎಸ್‌ ಟಿ ಸಿದ್ಧತೆ ಹಿನ್ನೆಲೆಯಲ್ಲಿ ಉಂಟಾದ  ತಾತ್ಕಾಲಿಕ ವ್ಯತ್ಯಯಗಳು ಕಾರಣ. ಆದರೆ ಅದು ಮುಂದಿನ ದಿನಗಳಲ್ಲಿ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ" ಎಂದು ಜಿಮ್ ಯಾಂಗ್ ಕಿಮ್ ಹೇಳಿದರು.

ಮುಂದಿನ ವಾರ ನಡೆಯುವ ವಿಶ್ವ ಅರ್ಥಿಕ ಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ನಿಯೋಗ ಭಾಗವಹಿಸಲಿದ್ದು, ಭಾರತದ ಜಿಡಿಪಿ ಪ್ರಗತಿದರ ಮೊದಲ ತ್ರೈಮಾಸಿಕದಲ್ಲಿ 5.7 ಆಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ ಇದು  6.1 ಇತ್ತು. ಕಳೆದ ವರ್ಷ ಇದೇ ಅವಧಿಗೆ ಜಿಡಿಪಿ ಪ್ರಗತಿದರ 7.9ರಷ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com