ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಸಂಧಾನಕಾರರ ನೇಮಕ; ಭಾರತ ಪ್ರಸ್ತಾವನೆ ತಿರಸ್ಕರಿಸಿದ ಪಾಕ್

ಜಮ್ಮು ಮತ್ತು ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಸಂಧಾನಕಾರರಾಗಿ ದಿನೇಶ್ವರ್ ಶರ್ಮಾ ಅವರನ್ನು ನೇಮಕ ಮಾಡಿರುವ ಭಾರತದ ಪ್ರಸ್ತಾವನೆಯನ್ನು ಪಾಕಿಸ್ತಾನ ಮಂಗಳವಾರ ತಿರಸ್ಕರಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಸಂಧಾನಕಾರರಾಗಿ ದಿನೇಶ್ವರ್ ಶರ್ಮಾ ಅವರನ್ನು ನೇಮಕ ಮಾಡಿರುವ ಭಾರತದ ಪ್ರಸ್ತಾವನೆಯನ್ನು ಪಾಕಿಸ್ತಾನ ಮಂಗಳವಾರ ತಿರಸ್ಕರಿಸಿದೆ. 

ದಿನೇಶ್ವರ್ ಶರ್ಮಾ ಅವರ ನೇಮಕ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ನಫೀಜ್ ಜಕಾರಿಯಾ ಅವರು, ಭಾರತದ ಈ ನಡೆ ಪ್ರಾಮಾಣಿಕ ಹಾಗೂ ವಾಸ್ತವಿಕತೆಯಿದೆ ಎಂಬುದು ಕಂಡು ಬರುತ್ತಿಲ್ಲ ಎಂದು ಹೇಳಿದ್ದಾರೆ. 

ಹುರಿಯತ್ ಕಾನ್ಫರೆನ್ಸ್ ಇಲ್ಲದೆಯೇ ಕಾಶ್ಮೀರ ವಿಚಾರ ಕುರಿತಂತೆ ಯಾವುದೇ ರೀತಿಯ ಮಾತುಕತೆಗಳು ನಡೆಯಲು ಸಾಧ್ಯವಿಲ್ಲ. ಕಾಶ್ಮೀರ ವಿಚಾರ ಕುರಿತಂತೆ ಆರ್ಥಪೂರ್ಣ ಮಾತುಕತೆಗಳು ನಡೆಯಬೇಕಾದರೆ, ಭಾರತ, ಪಾಕಿಸ್ತಾನ ಮತ್ತು ಕಾಶ್ಮೀರಿಗರು ಇರಲೇಬೇಕು. ಹಿರಿಯತ್ ನಾಯಕತ್ವವಿಲ್ಲದೆಯೇ ಮಾತುಕತೆ ನಡೆಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. 

ಕಾಶ್ಮೀರಿಗರ ಸಮಸ್ಯೆಗಲನ್ನು ಆರ್ಥಮಾಡಿಕೊಳ್ಳುವ ಸಲುವಾಗಿ ಭಾರತ ಸಂಧಾನಕಾರರನ್ನು ನೇಮಕ ಮಾಡಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಗಳು ಮತ್ತು ಕಾಶ್ಮೀರಿಗರ ನಿರ್ಧಾರದಂತೆ ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಇತ್ಯರ್ಥಪಡಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com