ಶಾಂತಿ ಸ್ಥಾಪನೆಗೆ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರ ಆಗತ್ಯ: ಪ್ರಧಾನಿ ಮೋದಿ

ಶಾಂತಿ ಸ್ಥಾಪನೆಗಾಗಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರ ಅತ್ಯಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬ್ರಿಕ್ಸ್ ಸಮಾವೇಶದಲ್ಲಿ  ಪ್ರಧಾನಿ ಮೋದಿ
ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ
Updated on
ಬೀಜಿಂಗ್: ಶಾಂತಿ ಸ್ಥಾಪನೆಗಾಗಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರ ಅತ್ಯಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಚೀನಾದ ಕ್ಸಿಯಾಮೆನ್‌ ನಲ್ಲಿ ನಡೆಯುತ್ತಿರುವ ಬ್ರಿಕ್ ರಾಷ್ಟ್ರಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, "ಶಾಂತಿ ಸ್ಥಾಪನೆ ಮತ್ತು ಅಭಿವೃದ್ಧಿಗೆ ಪರಸ್ಪರ ಸಹಕಾರ ಮುಖ್ಯ. ಬಡತನ ವಿರುದ್ಧದ ಹೋರಾಟದಲ್ಲಿ  ತಂತ್ರಜ್ಞಾನ ಬಳಸಬೇಕಿದೆ. ಬ್ರಿಕ್ಸ್‌ ರಾಷ್ಟ್ರಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದಿದ್ದಾರೆ. ಅಂತೆಯೇ ಚೀನಾದ ವಿರೋಧದ ಹೊರತಾಗಿಯೂ ಪ್ರಧಾನಿ ಮೋದಿ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ವಿರುದ್ಧ ಪರೋಕ್ಷ  ಟೀಕೆ ಮಾಡಿ, ಭಯೋತ್ಪಾದನೆ ನಿಗ್ರಹಕ್ಕೆ ವಿಶ್ವ ಸಮುದಾಯ ಒಗ್ಗೂಡಿ ಕೆಲಸ ಮಾಡಬೇಕಿದ್ದು, ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳು ಸೌರಶಕ್ತಿಯನ್ನು ಬಲಪಡಿಸುವ ದಿಶೆಯಲ್ಲಿ ಐಎಸ್‌ಎ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯ ಇದೆ ಎಂದು  ಹೇಳಿದರು.

ಬ್ರಿಕ್ಸ್‌ನ ಪಾಲುದಾರಿಕೆ ಮತ್ತು ಹೊಸ ಆಲೋಚನೆಗಳು ಪ್ರಗತಿಯ ಸಾಧನವಾಗಲಿವೆ ಎಂದ ಪ್ರಧಾನಿ ಮೋದಿ, ಅಂತೆಯೇ ಜನರಿಗೆ ಉತ್ತಮ ಆರೋಗ್ಯ, ಶೌಚ ವ್ಯವಸ್ಥೆ, ಕೌಶಲಾಭಿವೃದ್ಧಿ, ಆಹಾರ ಭದ್ರತೆ, ಲಿಂಗ ಸಮಾನತೆ,  ಇಂಧನ ಮತ್ತು ಶಿಕ್ಷಣ ಕುರಿತಾಗಿಯೂ ನಾವು ಹೋರಾಡುತ್ತಿದ್ದೇವೆ' ಎಂದು ಹೇಳಿದರು. "ಕಪ್ಪು ಹಣ ವಿರುದ್ಧದ ಹೋರಾಟ ಮುಂದುವರಿಸುತ್ತೇವೆ. ಈ ಹೋರಾಟಕ್ಕೆ ಸಹಕಾರ ಅಗತ್ಯ. ದೇಶದ ಯುವಜನ ನಮ್ಮ ಶಕ್ತಿ. ಸೌರಶಕ್ತಿ ಬಳಕೆ,  ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಬೇಕಿದೆ. ಬಡತನ ನಿರ್ಮೂಲನೆಗೆ ಒತ್ತು ನೀಡಿದ್ದು, ಆರೋಗ್ಯ, ನೈರ್ಮಲ್ಯ, ಕೌಶಲ, ಆಹಾರ ಭದ್ರತೆ, ಲಿಂಗ ಸಮಾನತೆ, ಇಂಧನ, ಶಿಕ್ಷಣ ಕ್ಷೇತ್ರಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ  ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com