ಉತ್ತರ ಕೊರಿಯಾ ವಿರುದ್ಧ ಅಮೆರಿಕದ ವಾಣಿಜ್ಯ ನಿರ್ಬಂಧ ಹೇರಿಕೆ ನಿರ್ಧಾರ ಸರಿಯಲ್ಲ: ಚೀನಾ

ಅಣ್ವಸ್ತ್ರ ಪರೀಕ್ಷೆ ಮಾಡುವ ಮೂಲಕ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಬೆನ್ನಿಗೆ ಮತ್ತೆ ಚೀನಾ ನಿಂತಿದ್ದು, ಉತ್ತರ ಕೊರಿಯಾದ ಮೇಲೆ ವಾಣಿಜ್ಯ ನಿಷೇಧ ಹೇರುವ ಅಮೆರಿಕ ಕ್ರಮ ಸರಿಯಲ್ಲ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಅಣ್ವಸ್ತ್ರ ಪರೀಕ್ಷೆ ಮಾಡುವ ಮೂಲಕ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಬೆನ್ನಿಗೆ ಮತ್ತೆ ಚೀನಾ ನಿಂತಿದ್ದು, ಉತ್ತರ ಕೊರಿಯಾದ ಮೇಲೆ ವಾಣಿಜ್ಯ ನಿಷೇಧ ಹೇರುವ ಅಮೆರಿಕ ಕ್ರಮ ಸರಿಯಲ್ಲ  ಎಂದು ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ಅನ್ಯಾಯಯುತವಾಗಿದ್ದು, ಪ್ರಸ್ತುತ ಪರಿಸ್ಥಿತಿ ಇನ್ನೂ ನಮ್ಮ ನಿಯಂತ್ರಣದಲ್ಲಿಯೇ ಇದೆ. ಸಮಸ್ಯೆ ಪರಿಹಾರಕ್ಕೆ ನಾವು ಯತ್ನಿಸುತ್ತಿದ್ದೇವೆ. ಹೀಗಿರುವಾಗ ಉತ್ತರ ಕೊರಿಯಾ ಮೇಲೆ  ವಾಣಿಜ್ಯ ನಿರ್ಬಂಧ ಹೇರುವ ಅಮೆರಿಕ ನಿರ್ಧಾರ ಸರಿಯಲ್ಲ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಗೆಂಗ್ ಶಾಂಗ್ ಹೇಳಿದ್ದಾರೆ. ಅಮೆರಿಕದ ದುಡುಕಿನ ನಿರ್ಧಾರ ಮುಂದೆ ಕಠಿಣ ಸಮಸ್ಯೆಗಳನ್ನು ತಂದೊಡ್ಡಬಹುದು.  ಹೀಗಾಗಿ ವಿಶ್ವಸಂಸ್ಥೆ ಅಂತಹ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾ ವಿರುದ್ಧ ಕಿಡಿಕಾರಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಣ್ವಸ್ತ್ರ ಪರೀಕ್ಷೆ ಮೂಲಕ ಉತ್ತರ ಕೊರಿಯಾ ವಿಶ್ವಶಾಂತಿಯ ಭಂಗಕ್ಕೆ ಯತ್ನಿಸುತ್ತಿದೆ. ಹೀಗಾಗಿ  ಉತ್ತರ ಕೊರಿಯಾ ವಿರುದ್ಧ ವಾಣಿಜ್ಯ ನಿರ್ಬಂಧ ಹೇರುವಂತೆ ವಿಶ್ವಸಂಸ್ಥೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಅಮೆರಿಕದ ಹೇಳಿಕೆ ಬೆನ್ನಲ್ಲೇ ಚೀನಾ ಇದನ್ನು ಅನ್ಯಾಯ ಎಂದು ಹೇಳಿದೆ.
ಉತ್ತರ ಕೊರಿಯಾ ಚೀನಾದ ಪ್ರಮುಖ ವಾಣಿಜ್ಯ ಸ್ನೇಹಿತನಾಗಿದ್ದು, ಒಂದು ವೇಳೆ ಉತ್ತರ ಕೊರಿಯಾ ಮೇಲೆ ವಿಶ್ವ ಸಂಸ್ಥೆ ನಿರ್ಬಂಧ ಹೇರಿದರೆ ಇಡೀ ವಿಶ್ವದಲ್ಲಿ ಉತ್ತರ ಕೊರಿಯಾದೊಂದಿಗೆ ಅತೀ ಪ್ರಮಾಣದ ವಾಣಿಜ್ಯ ಸಂಬಂಧ  ಹೊಂದಿರುವ ಪ್ರಮುಖ ದೇಶವಾಗಿರುವ ಚೀನಾ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com