ಮಾಂಸ ಜಾಹೀರಾತಿನಲ್ಲಿ ಗಣೇಶ; ಆಸ್ಟ್ರೇಲಿಯಾ ಸಂಸ್ಥೆ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ
ವಿದೇಶ
ಮಾಂಸ ಜಾಹೀರಾತಿನಲ್ಲಿ ಗಣೇಶ; ಆಸ್ಟ್ರೇಲಿಯಾ ಸಂಸ್ಥೆ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ
ಆಸ್ಟ್ರೇಲಿಯಾದ ಜಾಹೀರಾತು ಸಂಸ್ಥೆಯೊಂದು ತನ್ನ ಮಾಂಸ ಜಾಹೀರಾತಿಗೆ ಹಿಂದೂಗಳ ಆರಾಧ್ಯ ದೈವ ವಿನಾಯಕನನ್ನು ಬಳಸಿಕೊಳ್ಳುವ ಮೂಲಕ ಹಿಂದುಗಳ ಭಾವನೆಗಳಿಗೆ ದಕ್ಕೆಯುಂಟು ಮಾಡಿದೆ...
ಮೆಲ್ಬೋರ್ನ್: ಆಸ್ಟ್ರೇಲಿಯಾದ ಜಾಹೀರಾತು ಸಂಸ್ಥೆಯೊಂದು ತನ್ನ ಮಾಂಸ ಜಾಹೀರಾತಿಗೆ ಹಿಂದೂಗಳ ಆರಾಧ್ಯ ದೈವ ವಿನಾಯಕನನ್ನು ಬಳಸಿಕೊಳ್ಳುವ ಮೂಲಕ ಹಿಂದುಗಳ ಭಾವನೆಗಳಿಗೆ ದಕ್ಕೆಯುಂಟು ಮಾಡಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಆಸ್ಪ್ರೇಲಿಯಾದ ಮೀಟ್ ಆ್ಯಂಡ್ ಲಿವ್ ಸ್ಟಾಕ್ (ಎಂಎಲ್ಎ) ಕಂಪನಿ ಈ ಜಾಹೀರಾತನ್ನು ಪ್ರಕಟಿಸಿದ್ದು, ಜಾಹೀರಾತು ಸಂಸ್ಥೆಯ ವಿರುದ್ಧ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಎಂಎಲ್ಎ ಆಸ್ಟ್ರೇಲಿಯಾದ ಮಾಂಸ ಜಾಹೀರಾತು ಕಂಪನಿಯಾಗಿದ್ದು, ಸೆಪ್ಟೆಂಬರ್6 ರಂದು ಜಾಹೀರಾತೊಂದನ್ನು ಬಿಡುಗಡೆ ಮಾಡಲಾಗಿದೆ. ಜಾಹೀರಾತಿನಲ್ಲಿ ಭಗವಾನ್ ಗಣೇಶ ಸೇರಿದಂತೆ ಇತರೇ ದೇವರುಗಳು ಮಾಂಸಾಹಾರ ಸೇವಿಸುತ್ತಿರುವುದು ಕಂಡು ಬಂದಿದ್ದು. ಇದೀಗ ಭಾರೀ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಜಾಹೀರಾತಿನಲ್ಲಿ ಗಣೇಶ ಸೇರಿದಂತೆ ಇತರೇ ದೇವರುಗಳು, ಪ್ರವಾದಿಗಳು ಹಬ್ಬದ ಹಿನ್ನಲೆಯಲ್ಲಿ ಒಟ್ಟಿಗೆ ಸೇರಿಸುತ್ತಾರೆ. ಈ ವೇಳೆ ಕುರಿಮಾಂಸ 'ದೇವರ ಆಹಾರ' ಎಂದು ಬಿಂಬಿಸಿ ಒಟ್ಟಿಗೆ ಮಾಂಸಾಹಾರ ಸೇವನೆ ಮಾಡುತ್ತಿರುವುದು ಕಂಡು ಬಂದಿದೆ.
ಈ ಜಾಹೀರಾತಿಗೆ ಇದೀಗ ಆಸ್ಟ್ರೇಲಿಯಾದ ಹಿಂದೂ ಪರಸಂಘಟನೆಗಳು ತೀವ್ರ ಕಿಡಿಕಾರಿದ್ದು, ಸೂಕ್ಷ್ಮಗ್ರಹಿಕೆ ಇಲ್ಲದ ಜಾಹೀರಾತು ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಹೀರಾತಿಗೆ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶಗಳು ವ್ಯಕ್ತವಾಗುತ್ತಿದವೆ. ಕೂಡಲೇ ಜಾಹೀರಾತಿನ ವಿಡಿಯೋವನ್ನು ತೆಗೆದುಹಾಕಿ, ಜಾಹೀರಾತು ಕಂಪನಿ ಹಿಂದೂಗಳ ಕ್ಷಮೆಯಾಚಿಸಬೇಕೆಂದು ಆಗ್ರಹಗಳು ವ್ಯಕ್ತವಾಗತೊಡಗಿವೆ.
ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಾಹೀರಾತು ಸಂಘದ ಮಾರುಕಟ್ಟೆ ವ್ಯವಸ್ಥಾಪಕ ಆ್ಯಂಡ್ರ್ಯೂ ಹೋವಿಯವರು, ಜಾಹೀರಾತಿನಲ್ಲಿ ಎಲ್ಲಾ ಧರ್ಮದ ದೇವರುಗಳನ್ನು ಬಳಸಿಕೊಳ್ಳಲಾಗಿದೆ. ಎಲ್ಲಾ ದೇವರುಗಳನ್ನು ಬಳಸಿಕೊಂಡು ಜಾಹೀರಾತನ್ನು ಮಾಡುವ ಉದ್ದೇಶವಿತ್ತೇ ಹೊರತು, ಯಾವುದೇ ಧರ್ಮ, ಸಮುದಾಯಗಳ ನಂಬಿಕೆಗಳಿಗೆ ದಕ್ಕೆಯುಂತು ಮಾಡುವ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ