ಫ್ಲೋರಿಡಾಗೆ ಅಪ್ಪಳಿಸಿದ ಇರ್ಮಾ ಚಂಡಮಾರುತ!

ವಿನಾಶಕಾರಿ ಚಂಡಮಾರುತ ಇರ್ಮಾ ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸಿದ್ದು, ಸುಮಾರು 130 ಮೈಲುಗಳ ವೇಗದಲ್ಲಿ ಇರ್ಮಾ ಚಂಡಮಾರುತ ಬೀಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಫ್ಲೋರಿಡಾ: ವಿನಾಶಕಾರಿ ಚಂಡಮಾರುತ ಇರ್ಮಾ ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸಿದ್ದು, ಸುಮಾರು 130 ಮೈಲುಗಳ ವೇಗದಲ್ಲಿ ಇರ್ಮಾ ಚಂಡಮಾರುತ ಬೀಸುತ್ತಿದೆ.
ಈ ಹಿಂದೆ ಕೆರಿಬಿಯನ್ ದ್ವೀಪದಲ್ಲಿ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದ ವಿನಾಶಕಾರಿ ಇರ್ಮಾ ಚಂಡಮಾರುತ ಇದೀಗ ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸಿದ್ದು, ಕೆಟಗರಿ-4 ಪ್ರಬಲತೆಯೊಂದಿಗೆ ಫ್ಲೋರಿಡಾವನ್ನು ಅಪ್ಪಳಿಸಿದೆ.  ಚಂಡಮಾರುತಗಳ ವೇಗಕ್ಕೆ ಅನುಗುಣವಾಗಿ ಅವುಗಳಿಗೆ ಶ್ರೇಣಿ ನೀಡಲಾಗುತ್ತದೆ. ಅದರಂತೆ ಪ್ರಸ್ತುತ ಫ್ಲೋರಿಡಾಗೆ ಅಪ್ಪಳಿಸಿರುವ ಇರ್ಮಾ ಚಂಡಮಾರುತ 4ನೇ ಶ್ರೇಣಿಗೆ ಸೇರಿದ ವೇಗದೊಂದಿಗೆ ಫ್ಲೋರಿಡಾಗೆ ಅಪ್ಪಳಿಸಿದೆ ಎಂದು  ಹವಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇರ್ಮಾ ಚಂಡಮಾರುತ ಅಪ್ಪಳಿಸುವ ಭೀತಿಯಿಂದ ಈ ಹಿಂದೆ ಮಿಯಾಮಿ ಪ್ರಾಂತ್ಯದಿಂದ ಲಕ್ಷಾಂತರ ಜನರು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರವು ಮಾಡಲಾಗಿದೆ. ಆದಾಗ್ಯೂ ಸಾವು-ನೋವಿನ ವರದಿಗಳಾಗಿವೆ ಎಂದು  ತಿಳಿದುಬಂದಿದೆ.
ಈ ಹಿಂದೆ ಕೆರಿಬಿಯನ್ ದ್ವೀಪದಿಂದ ಗರಿಷ್ಠ ಸಾಮರ್ಥ್ಯದ ವೇಗದೊಂದಿಗೆ ಅಂದರೆ 5ನೇ ಶ್ರೇಣಿಯ ಸಾಮರ್ಥ್ಯದ ವೇಗದಲ್ಲಿ ಕ್ಯೂಬಾದ ಕ್ಯಾಮಾಗ್ಯುಯೆ ಪ್ರದೇಶದ ಮೇಲೆ ಅಪ್ಪಳಿಸಿದ್ದ ಚಂಡಮಾರುತ ಅಲ್ಲಿ ಭಾರೀ ಮಳೆ ಸುರಿಸಿ  ಸಾವು-ನೋವು ಉಂಟು ಮಾಡಿತ್ತು. ಇಲ್ಲಿ ಕನಿಷ್ಠ 24 ಮಂದಿ ಸಾವಿಗೀಡಾಗಿದ್ದರು. ಬಳಿಕ ಫ್ಲೋರಿಡಾ ದ್ವೀಪದತ್ತ ಪ್ರಯಾಣಿಸಿದ್ದ ಇರ್ಮಾ ಚಂಡಮಾರುತ ಇಂದು ಫ್ಲೋರಿಡಾಗೆ ಅಪ್ಪಳಿಸಿದೆ. ಗಂಟೆಗೆ 260 ಕಿಮೀ ವೇಗದಲ್ಲಿ ಇರ್ಮಾ  ಚಂಡಮಾರುತ ಫ್ಲೋರಿಡಾಗೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com