ಇರ್ಮಾ ಚಂಡಮಾರುತ ಹೊಡೆತಕ್ಕೆ ಸಮುದ್ರ ತೀರವೇ ನಾಪತ್ತೆ!

ವಿನಾಶಕಾರಿ ಚಂಡಮಾರುತ ಇರ್ಮಾ ಹೊಡೆತಕ್ಕೆ ಅಮೆರಿಕದ ಫ್ಲೋರಿಡಾ ತತ್ತರಿಸಿ ಹೋಗಿದ್ದು, ಪ್ರಕೃತಿ ಮಾತೆಯ ಹೊಡೆತ ಹೇಗಿದೆ ಎಂದರೆ ಫ್ಲೋರಿಡಾದ ವಿಶ್ವ ವಿಖ್ಯಾತ ಟಂಪಾ ಬೀಚ್ ನಲ್ಲಿನ ಸಮುದ್ರದ ನೀರೆ ನಾಪತ್ತೆಯಾಗಿದೆ.
ಖಾಲಿಯಾಗಿರುವ ಟಂಪಾ ಬೀಚ್
ಖಾಲಿಯಾಗಿರುವ ಟಂಪಾ ಬೀಚ್
ಫ್ಲೋರಿಡಾ: ವಿನಾಶಕಾರಿ ಚಂಡಮಾರುತ ಇರ್ಮಾ ಹೊಡೆತಕ್ಕೆ ಅಮೆರಿಕದ ಫ್ಲೋರಿಡಾ ತತ್ತರಿಸಿ ಹೋಗಿದ್ದು, ಪ್ರಕೃತಿ ಮಾತೆಯ ಹೊಡೆತ ಹೇಗಿದೆ ಎಂದರೆ ಫ್ಲೋರಿಡಾದ ವಿಶ್ವ ವಿಖ್ಯಾತ ಟಂಪಾ ಬೀಚ್ ನಲ್ಲಿನ ಸಮುದ್ರದ ನೀರೆ ನಾಪತ್ತೆಯಾಗಿದೆ.
ಇರ್ಮಾ ಚಂಡಮಾರುತದ ವೇಗಕ್ಕೆ ಸಿಲುಕಿ ಸಮುದ್ರದ ನೀರು ಪ್ರವಾಹದ ರೂಪದಲ್ಲಿ ಹರಿದು ಹೋಗಿದೆ. ಕಿ.ಮೀ ಗಟ್ಟಲೆ ಸಮುದ್ರದ ನೀರು ಹರಿದು ಹೋಗಿದ್ದು, ಟಂಪಾ ಬೀಚ್ ನಲ್ಲಿ ಕಣ್ಣು ಹಾಸಿದಷ್ಟೂ ದೂರ ನೀರೇ ಇಲ್ಲದಂತಾಗಿದೆ.  2 ದಿನಗಳ ಹಿಂದಷ್ಟೇ ಟಂಪಾ ಬೀಚ್ ನಲ್ಲಿ ಸಮುದ್ರ ತುಂಬಿ ತುಳುಕುತಿತ್ತು. ಆದರೆ ಚಂಡಮಾರುತದ ಹೊಡೆತಕ್ಕೆ ಇದೀಗ ಸಮುದ್ರವೇ ಖಾಲಿಯಾಗಿ ಹೋಗಿದೆ.
ತಜ್ಞರು ಏನು ಹೇಳುತ್ತಾರೆ?
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ತಜ್ಞರು ಸಾಮಾನ್ಯವಾಗಿ ಚಂಡಮಾರುತದ ಹೊಡೆತಕ್ಕೆ ಸಮುದ್ರ ಖಾಲಿಯಾಗಿವುದು ನೈಸರ್ಗಿಕ ಪ್ರಕ್ರಿಯೆ. ಚಂಡಮಾರುತದ ಗಾಳಿಯ ವೇಗಕ್ಕೆ ಸಿಲುಕಿ ನೀರು ಕೂಡ ದೂರ ದೂರಕ್ಕೆ  ಹರಿದು ಹೋಗುತ್ತದೆ. ಕೆಲವೊಮ್ಮೆ ಕಿ.ಮೀ ಗಟ್ಟಲೆ ನೀರು ಖಾಲಿಯಾಗುತ್ತದೆ ಎಂದು ಹೇಳಿದ್ದಾರೆ. ಹೀಗೆ ಸಮುದ್ರದಿಂದ ಖಾಲಿಯಾದ ನೀರು ಮತ್ತೆ ಭರ್ತಿಯಾಗಲು ವರ್ಷಾನುಗಟ್ಟಲೆ ಹಿಡಿಯುತ್ತದೆ. ಇನ್ನೂ ಕೆಲವೊಮ್ಮೆ ರಾತ್ರೋ  ರಾತ್ರಿ ನೀರು ತುಂಬಿ ಹೋಗುತ್ತದೆ. ಇದು ಪ್ರಕೃತಿಯ ಸಹಜ ಗುಣ. ಅಮೆರಿಕದ ಚಂಡಮಾರುತಗಳ ಇತಿಹಾಸದಲ್ಲಿ ಖಾಲಿಯಾದ ಸಮುದ್ರದ ನೀರು ದಶಕಗಳಾದರೂ ತುಂಬದ ಉದಾಹರಣೆಗಳೂ ಕೂಡ ಇದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com