ಇರ್ಮಾ ಚಂಡಮಾರುತಕ್ಕೆ ಸೈಂಟ್ ಮಾರ್ಟಿನ್ ತತ್ತರ: 170 ಭಾರತೀಯರ ರಕ್ಷಣೆ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

ಇರ್ಮಾ ಚಂಡಮಾರುತದಿಂದಾಗಿ ತೀವ್ರವಾಗಿ ತತ್ತರಿಸಿರುವ ಸೈಂಟ್ ಮಾರ್ಟಿನ್ ನಿಂದ 170 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ಬುಧವಾರ ತಿಳಿದುಬಂದಿದೆ...
ಇರ್ಮಾ ಚಂಡಮಾರುತಕ್ಕೆ ಸೈಂಟ್ ಮಾರ್ಟಿನ್ ತತ್ತರ
ಇರ್ಮಾ ಚಂಡಮಾರುತಕ್ಕೆ ಸೈಂಟ್ ಮಾರ್ಟಿನ್ ತತ್ತರ

ನವದೆಹಲಿ: ಇರ್ಮಾ ಚಂಡಮಾರುತದಿಂದಾಗಿ ತೀವ್ರವಾಗಿ ತತ್ತರಿಸಿರುವ ಸೈಂಟ್ ಮಾರ್ಟಿನ್ ನಿಂದ 170 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ಬುಧವಾರ ತಿಳಿದುಬಂದಿದೆ. 

ಸೈಂಟ್ ಮಾರ್ಟಿನ್ ನಿಂದ 170 ಭಾರತೀಯರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಕ್ಯಾರಿಬಿಯನ್ ದ್ವೀಪ ಸಮೂಹದ ಕ್ಯುರಾಕೋಗೆ ವಿಶೇಷ ವಿಮಾನಗಳಲ್ಲಿ ಕರೆತಂದಿದ್ದಾರೆ. 

ಈ ಕುರಿತಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿಕೆ ನೀಡಿದ್ದು, ಇರ್ಮಾ ಸುಂಟರಗಾಳಿ ಸಂತ್ರಸ್ತರಾದ 170 ಭಾರತೀಯರೊಂದಿಗೆ ಇತರೆ 60 ಮಂದಿಯನ್ನೂ ಕೂಡ ರಕ್ಷಣೆಮಾಡಲಾಗಿದೆ ಎಂದು ವೆನಜುವೆಲಾದಲ್ಲಿನ ಭಾರತೀಯ ರಾಯಭಾರಿ ರಾಹುಲ್ ಶ್ರೀವಾಸ್ತವ ಅವರು ತಿಳಿಸಿದ್ದಾರೆಂದು ಹೇಳಿದ್ದಾರೆ. 

ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಟ್ವೀಟ್ ಮಾಡಿದ್ದು, ಕಳೆದ ರಾತ್ರಿ 110 ಭಾರತೀಯರನ್ನು ಮತ್ತು ಭಾರತ ಸಂಜಾತ ಸಂತ್ರಸ್ತರನ್ನು ಸೈಂಟ್ ಮಾರ್ಟಿನ್ ನಿಂದ ಕ್ಯುರಾಕೋಗೆ ವಿಶೇಷ ವಿಮಾನಗಳ ಮೂಲಕ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com