ಅಣ್ವಸ್ತ್ರ ಪರೀಕ್ಷೆ: ಉತ್ತರ ಕೊರಿಯಾ ಇಂಧನ ರಫ್ತಿಗೆ ಚೀನಾ ಮಿತಿ ಹೇರಿಕೆ!

ಕಾಶ್ಮೀರ ವಿಚಾರವಾಗಿ ತಾವು ತಲೆ ಹಾಕುವುದಿಲ್ಲ ಎಂದು ಹೇಳಿ ಪಾಕಿಸ್ತಾಕ್ಕೆ ಕೈಕೊಟ್ಟಿದ್ದ ಚೀನಾ ಇದೀಗ ತನ್ನ ನೆಚ್ಚಿನ ಆಪ್ತ ರಾಷ್ಟ್ರ ಉತ್ತರ ಕೊರಿಯಾಗೂ ಕೈಕೊಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಕಾಶ್ಮೀರ ವಿಚಾರವಾಗಿ ತಾವು ತಲೆ ಹಾಕುವುದಿಲ್ಲ ಎಂದು ಹೇಳಿ ಪಾಕಿಸ್ತಾಕ್ಕೆ ಕೈಕೊಟ್ಟಿದ್ದ ಚೀನಾ ಇದೀಗ ತನ್ನ ನೆಚ್ಚಿನ ಆಪ್ತ ರಾಷ್ಟ್ರ ಉತ್ತರ ಕೊರಿಯಾಗೂ ಕೈಕೊಟ್ಟಿದೆ.
ವಿಶ್ವ ಸಮುದಾಯದ ತೀವ್ರ ವಿರೋಧದ ಹೊರತಾಗಿಯೂ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ಮಾಡಿರುವ ಹಿನ್ನಲೆಯಲ್ಲಿ ಆ ದೇಶಕ್ಕೆ ಚೀನಾದಿಂದ ರಫ್ತಾಗುತ್ತಿದ್ದ ಇಂಧನದ ಮೇಲೆ ಮಿತಿ ಹೇರಲು ನಿರ್ಧರಿಸಲಾಗಿದೆ. ಜನವರಿ 1ರಿಂದ  ಜಾರಿಗೆ ಬರುವಂತೆ ಉತ್ತರ ಕೊರಿಯಾಗೆ ಚೀನಾದಿಂದ ರಫ್ತಾಗುತ್ತಿರುವ ಇಂಧನ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದ್ದು, ಜನವರಿ 1 ರಿಂದ ಉತ್ತರ ಕೊರಿಯಾಗೆ ನಿತ್ಯ 2 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾತ್ರ ರಫ್ತು ಮಾಡಲು  ಚೀನಾ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಈಗಾಗಲೇ ಇಂಧನ ಇಲಾಖೆಗೆ ಆದೇಶಿಸಲಾಗಿದ್ದು, ದೊಡ್ಡ ಮಟ್ಟದಲ್ಲಿ ಇಂಧನ ರಫ್ತು ತಡೆಯುವಂತೆ ಸೂಚಿಸಲಾಗಿದೆ.

ಕೇವಲ ಇಂಧನ ಮಾತ್ರವಲ್ಲದೇ ಉತ್ತರ ಕೊರಿಯಾದಿಂದ ಚೀನಾಗೆ ಆಮದಾಗುತ್ತಿದ್ದ ಟೆಕ್ಸ್ ಟೈಲ್ ಗಳ ಮೇಲೂ ಚೀನಾ ನಿರ್ಬಂಧ ಹೇರಿದ್ದು, ಜವಳಿ ಉದ್ಯಮ ಉತ್ತರ ಕೊರಿಯಾದ ಪ್ರಮುಖ ಆದಾಯದ ಮೂಲವಾಗಿದೆ. ಇದಲ್ಲದೆ  ಚೀನಾ ಉತ್ತರ ಕೊರಿಯಾದಿಂದ ಕಲ್ಲಿದ್ದಲು, ಕಬ್ಬಿಣದ ಅದಿರು ಮತ್ತು ಸಮುದ್ರ ಆಹಾರಗಳು ಸೇರಿದಂತೆ ಹಲವು ವಾಣಿಜ್ಯ ವಹಿವಾಟು ಹೊಂದಿದ್ದು, ಇವುಗಳ ಮೇಲೂ ನಿರ್ಬಂದ ಹೇರಬೇಕು ಎಂದು ಇದೀಗ ಚೀನಾ ಮೇಲೆ ವಿಶ್ವ  ಸಮುದಾಯ ಒತ್ತಡ ಹೇರುತ್ತಿದೆ.

ಮೂಲಗಳ ಪ್ರಕಾರ ಉತ್ತರ ಕೊರಿಯಾದ ಒಟ್ಟಾರೆ ಆದಾಯದ ಮೂಲಗಳಲ್ಲಿ ಚೀನಾ ಸಿಂಹಪಾಲು ಹೊಂದಿದ್ದು, ಉತ್ತರ ಕೊರಿಯಾದೊಂದಿಗೆ ಶೇ.90ರಷ್ಟು ವಾಣಿಜ್ಯ ವಹಿವಾಟು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com