ನವೆಂಬರ್'ನಲ್ಲಿ ಟ್ರಂಪ್ ಏಷ್ಯಾ ಪ್ರವಾಸ: ಭಾರತಕ್ಕೆ ಬರದಿದ್ದರೂ ಪ್ರಧಾನಿ ಮೋದಿಯೊಂದಿಗೆ ಮಾತುಕತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನವೆಂಬರ್ ತಿಂಗಳನಲ್ಲಿ ಚೀನಾ ಸೇರಿದಂತೆ ಐದು ಏಷ್ಯಾ ದೇಶಗಳ ಪ್ರವಾಸ ಕೈಗೊಳ್ಳುತ್ತಿದ್ದು, ಪ್ರವಾಸದ ವೇಳೆ ಭಾರತಕ್ಕೆ ಭೇಟಿ ನೀಡುತ್ತಿಲ್ಲ...
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನವೆಂಬರ್ ತಿಂಗಳನಲ್ಲಿ ಚೀನಾ ಸೇರಿದಂತೆ ಐದು ಏಷ್ಯಾ ದೇಶಗಳ ಪ್ರವಾಸ ಕೈಗೊಳ್ಳುತ್ತಿದ್ದು, ಪ್ರವಾಸದ ವೇಳೆ ಭಾರತಕ್ಕೆ ಭೇಟಿ ನೀಡುತ್ತಿಲ್ಲ ಎಂದು ವರದಿಗಳು ತಿಳಿಸಿವೆ. 
ಪ್ರವಾಸದ ವೇಳೆ ಭಾರತಕ್ಕೆ ಭೇಟಿ ನೀಡಲಿದ್ದರೂ ನವೆಂಬರ್ 10-10ರವರೆಗೆ ಫಿಲಿಪ್ಪೀನ್ಸ್'ನ ಮನಿಲಾದಲ್ಲಿ ನಡೆಯಲಿರುವ ಏಷ್ಯಾ ಸಮಾವೇಶದ ನಡುವೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ಮನಿಲಾದಲ್ಲಿ ಟ್ರಂಪ್ ಮತ್ತು ಮೋದಿ ಭೇಟಿಯಾದರೆ, ಅದು ಅವರ ನಡುವಿನ 3ನೇ ಭೇಟಿಯಾಗುತ್ತದೆ. ಜೂನ್ ವೇಳೆ ವಾಷಿಂಗ್ಟನ್ ಮತ್ತು ಜುಲೈನಲ್ಲಿ ಜರ್ಮನಿಯಲ್ಲಿ ನಡೆದ ಜಿ20 ಸಮಾವೇಶದ ಸಂದರ್ಭ ಅವರು 2ನೇ ಬಾರಿ ಭೇಟಿಯಾಗಿದ್ದರು. ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದ ತನ್ನ ನೀತಿ ಪ್ರಕಟಿಸಿದ ಬಳಿಕ ಮೋದಿ ಮತ್ತು ಟ್ರಂಪ್ ನಡುವಿನ ಮೊದಲನೇ ಭೇಟಿ ಇದಾಗಿದೆ. 
ನ.3-14ರ ನಡುವೆ ಏಷ್ಯಾ ಪ್ರವಾಸದ ವೇಳೆ ಟ್ರಂಪ್ ಅವರು ಚೀನಾ, ವಿಯೆಟ್ನಾಂ, ಜಪಾನ್, ದಕ್ಷಿಣ ಕೊರಿಯಾ ಮತ್ತು ಫಿಲಿಪ್ಪೀನ್ಸ್ ಗೆ ಭೇಟಿ ನೀಡಿದ್ದಾರೆ. ವಿಯೆಟ್ನಾಂನಲ್ಲಿನ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಸಮಾವೇಶದಲ್ಲೂ ಅವರೂ ಭಾಗವಹಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com