
ವಾಷಿಂಗ್ಟನ್ : ಮುಂದಿನ ವರ್ಷದ ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ಆಗಮಿಸುವಂತೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಆಹ್ವಾನ ನೀಡಿದೆ.
ಆದಾಗ್ಯೂ, ಈ ವಿಷಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಮೆರಿಕಾದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹೇಳಿದ್ದಾರೆ.
ಈ ವರ್ಷದ ನಂತರ ಡೊನಾಲ್ಡ್ ಟ್ರಂಪ್ ಪ್ರವಾಸ ಸಂಬಂಧ ಮಾತುಕತೆ ನಡೆಸಲು ಅಮೆರಿಕಾ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪೀ ಮತ್ತು ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಎನ್, ಮ್ಯಾಟಿಸ್ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಸ್ಯಾಂಡರ್ಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿವರ್ಷದ ಗಣರಾಜ್ಯೋತ್ಸವ ದಿನದಿಂದ ಏರ್ಪಡಿಸುವ ಮಿಲಿಟರಿ ಶಕ್ತಿ ಪ್ರದರ್ಶನ ಹಾಗೂ ದೇಶದ ಸಾಂಸ್ಕೃತಿಕ ವೈವಿಧ್ಯತೆ ಅನಾವರಣ ವೀಕ್ಷಣೆ ಸಮಾರಂಭಕ್ಕಾಗಿ ಬೇರೆ ದೇಶದ ಮುಖ್ಯಸ್ಥರನ್ನು ವಿಶೇಷ ಅತಿಥಿಯಾಗಿ ಭಾರತ ಆಹ್ವಾನಿಸುತ್ತದೆ.
ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ 10 ಏಷಿಯನ್ ರಾಷ್ಟ್ರಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಥೈಲ್ಯಾಂಡ್, ವಿಯೆಟ್ನಾಂ, ಇಂಡೊನೇಷ್ಯಾ, ಮಲೇಷಿಯಾ, ಫಿಲಿಫೈನ್ಸ್, ಸಿಂಗಾಪುರ, ಮ್ಯಾನ್ಮಾರ್, ಕಾಂಬೊಡಿಯಾ, ಲಾವ್ಹೋಸ್, ಬ್ರೂನೆಯ್ ರಾಷ್ಟ್ರಗಳ ಮುಖ್ಯಸ್ಥರು ಮುಖ್ಯ ಅತಿಥಿಗಳಾಗಿ ಪರೇಡ್ ನಲ್ಲಿ ಪಾಲ್ಗೊಂಡಿದ್ದರು.
2015 ರಲ್ಲಿ ನಡೆದಿದ್ದ 65 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾಜಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
Advertisement