ಅಮೆರಿಕಾ ನಂಬಬೇಡಿ; ಉತ್ತರ ಕೊರಿಯಾಗೆ ಇರಾನ್ ಅಧ್ಯಕ್ಷರ ಎಚ್ಚರಿಕೆ

ಅಮೆರಿಕಾನ ನಂಬಬೇಡಿ ಎಂದು ಉತ್ತರ ಕೊರಿಯಾಗೆ ಇರಾನ್ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.
ಇರಾನ್
ಇರಾನ್
Updated on
ತೆಹ್ರಾನ್: ಅಮೆರಿಕಾನ ನಂಬಬೇಡಿ ಎಂದು ಉತ್ತರ ಕೊರಿಯಾಗೆ ಇರಾನ್ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ. 
ಇರಾನ್ ಮೇಲೆ ನಿರ್ಬಂಧಗಳನ್ನು ಪುನಃ ಜಾರಿಗೆ ತರಲು ಅಮೆರಿಕ ನಿರ್ಧರಿಸಿರುವ ಬೆನ್ನಲ್ಲೇ ಇರಾನ್ ಉತ್ತರ ಕೊರಿಯಾದ ವಿದೇಶಾಂಗ ಸಚಿವರಿಗೆ ಈ ಸಲಹೆ ನೀಡಿದ್ದಾರೆ. " ಅಮೆರಿಕ ಯಾವುದೇ ಕಟ್ಟುಪಾಡುಗಳಿಗೆ ಬದ್ಧವಾಗಿರುವುದಿಲ್ಲ, ಅಮೆರಿಕದ ಆಡಳಿತದ ಇತ್ತೀಚಿನ ನಡತೆ ಅವಿಶ್ವಾಸ ಮೂಡುವಂತೆ ಮಾಡುತ್ತಿದೆ, ಈಗಿನ ಪರಿಸ್ಥಿತಿಯಲ್ಲಿ ಮಿತ್ರ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಇರಾನ್  ಅಧ್ಯಕ್ಷ ರೂಹಾನಿ ಕರೆ ನೀಡಿದ್ದಾರೆ. 
ಹಲವು ಸಂಕಷ್ಟದ ಸ್ಥಿತಿಗಳಲ್ಲಿ ತಮ್ಮ ರಾಷ್ಟ್ರ ಹಾಗೂ ಉತ್ತರ ಕೊರಿಯಾ ದೇಶಗಳು ಪರಸ್ಪರ ಸಹಾಯ ಮಾಡಿವೆ, ಅಣ್ವಸ್ತ್ರ ನಿಶಸ್ತ್ರೀಕರಣದ ವಿಷಯದಲ್ಲಿ ಎರಡೂ ರಾಷ್ಟ್ರಗಳು ಎದುರಿಸಿರುವ ಸಂಕಷ್ಟವನ್ನೂ ಹೇಳಿರುವ ಇರಾನ್ ಅಧ್ಯಕ್ಷರು ಅಮೆರಿಕವನ್ನು ನಂಬದಂತೆ ಇರಾನ್ ಗೆ ಭೇಟಿ ನೀಡಿರುವ ಉತ್ತರ ಕೊರಿಯಾ ವಿದೇಶಾಂಗ ಸಚಿವರಿಗೆ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com