ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತದಲ್ಲಿ ದಾಳಿ ನಡೆಸಲು ಅಲ್ ಖೈದಾ ಸೈದ್ಧಾಂತಿಕವಾಗಿ ಉತ್ಸುಕವಾಗಿದೆ: ವಿಶ್ವಸಂಸ್ಥೆ ವರದಿ

ಭಯೋತ್ಪಾದಕ ಗುಂಪಿನ ಹೊಸ ಅಂಗಸಂಸ್ಥೆ ಭಾರತೀಯ ಉಪ ಖಂಡದಲ್ಲಿ ಅಲ್ ಖೈದಾ(ಎಕ್ಯುಐಎಸ್)...

ವಿಶ್ವಸಂಸ್ಥೆ: ಭಯೋತ್ಪಾದಕ ಗುಂಪಿನ ಹೊಸ ಅಂಗಸಂಸ್ಥೆ  ಭಾರತೀಯ ಉಪ ಖಂಡದಲ್ಲಿ ಅಲ್ ಖೈದಾ(ಎಕ್ಯುಐಎಸ್) ಭಾರತದ ಒಳಗೆ ದಾಳಿ ನಡೆಸಲು ಸೈದ್ಧಾಂತಿಕವಾಗಿ ಒಲವು ತೋರುತ್ತಿದೆ. ಆದರೆ ಅದರ ಸಾಮರ್ಥ್ಯ ಕಡಿಮೆಯಿದ್ದು ಪ್ರದೇಶದಲ್ಲಿ ಭದ್ರತಾ ಕ್ರಮಗಳ ಕಾರಣದಿಂದ ಪ್ರತ್ಯೇಕವಾಗಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ಅನಾಲಿಟಿಕಲ್ ಸಪೋರ್ಟ್ ಅಂಡ್ ಸಾಂಕ್ಷನ್ಸ್ ಮಾನಿಟರಿಂಗ್ ಟೀಮ್ ನ 22ನೇ ವರದಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್ ಖೈದಾ ಅನುಮೋದನೆ ಸಮಿತಿಗೆ ಸಲ್ಲಿಸಲಾಯಿತು.

ವರದಿಯಲ್ಲಿ, ವಿಸ್ತಾರವಾದ ಪ್ರದೇಶದೊಳಗೆ ಹೆಚ್ಚಿದ ಭದ್ರತೆಯ ಕ್ರಮಗಳಿಂದಾಗಿ ಭಾರತೀಯ ಉಪಖಂಡಗಳ ಅಲ್ ಖೈದಾ ಪ್ರತ್ಯೇಕವಾಗಿದ್ದು ಅವಕಾಶವಾದಿ ದಾಳಿಗಳಿಗೆ ಭದ್ರತೆಯ ಅಂತರಗಳನ್ನು ಬಯಸುತ್ತಿದೆ ಎಂದು ಹೇಳಿದೆ.

ಭಾರತದೊಳಗೆ ದಾಳಿ ನಡೆಸಲು ಅಲ್ ಖೈನ್ ಅಂಗಸಂಸ್ಥೆ ಸೈದ್ಧಾಂತಿಕವಾಗಿ ಉತ್ಸುಕವಾಗಿದೆ. ಆದರೆ ಅದರ ಸಾಮರ್ಥ್ಯ ಮಾತ್ರ ಕಡಿಮೆಯಾಗಿದೆ. ಅದೇ ಅಫ್ಘಾನಿಸ್ತಾನದಲ್ಲಿ ನೂರಾರು ಜನರು ಇದಕ್ಕೆ ಸದಸ್ಯರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಲ್ ಖೈದಾ ಸಂಘಟನೆ ದಕ್ಷಿಣ ಏಷ್ಯಾದಲ್ಲಿ ಇನ್ನು ಕೂಡ ಇರುವಿಕೆಯನ್ನು ಹೊಂದಿದ್ದು ಉಗ್ರಗಾಮಿ ಸಂಘಟನೆಯು ಸ್ಥಳೀಯ ಪರಿಸರದ ಲಕ್ಷಣಗಳನ್ನು ಅನುಸರಿಸಲು ನೋಡುತ್ತಿದೆ. ಸ್ಥಳೀಯ ಸಂಘರ್ಷಗಳು ಮತ್ತು ಸಮುದಾಯಗಳ ಜೊತೆ ಸಮ್ಮಿಳಿತವಾಗಿದ್ದು ತಾಲಿಬಾನಿಗಳ ಜೊತೆ ಸಂಪರ್ಕ ಹೊಂದಿದೆ ಎಂದು ವರದಿ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com