ಇನ್ನು ಮುಂದೆ ಕೌಶಲ್ಯಭರಿತ, ಅತಿ ಹೆಚ್ಚು ವೇತನ ಪಡೆಯುವ ನೌಕರರಿಗೆ ಹೆಚ್-1ಬಿ ವೀಸಾದಲ್ಲಿ ಆದ್ಯತೆ

ಅಮೆರಿಕಾ ಸರ್ಕಾರ ನೀಡುವ ಹೆಚ್ -1ಬಿ ವೀಸಾವನ್ನು ಹೆಚ್ಚು ಕೌಶಲ್ಯ ಹೊಂದಿರುವ ಮತ್ತು ಅತಿ ಹೆಚ್ಚು ವೇತನ ಪಡೆಯುವ ವಿದೇಶಿ ನೌಕರರಿಗೆ ನೀಡುವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕಾ ಸರ್ಕಾರ ನೀಡುವ ಹೆಚ್ -1ಬಿ ವೀಸಾವನ್ನು ಹೆಚ್ಚು ಕೌಶಲ್ಯ ಹೊಂದಿರುವ ಮತ್ತು ಅತಿ ಹೆಚ್ಚು ವೇತನ ಪಡೆಯುವ ವಿದೇಶಿ ನೌಕರರಿಗೆ ನೀಡುವ ಪ್ರಸ್ತಾವನೆಯನ್ನು ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕೈಗೊಂಡಿದೆ.

ಹೊಸ ಮೆರಿಟ್ ಆಧಾರಿತ ನಿಯಮಕ್ಕೆ ನಿನ್ನೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ -1 ಬಿ ವೀಸಾದಡಿ ಕೆಲಸ ಮಾಡುತ್ತಿರುವ ವಿದೇಶಿ ನೌಕರರನ್ನು ಒಳಗೊಂಡ ಕಂಪೆನಿಗಳು ಕಡ್ಡಾಯವಾಗಿ ಗೊತ್ತುಪಡಿಸಿದ ನೋಂದಣಿ ಅವಧಿಯಲ್ಲಿ ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆಗಳು (USCIS) ನೊಂದಿಗೆ ವಿದ್ಯುನ್ಮಾನವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಅಮೆರಿಕಾದ ಕಾಂಗ್ರೆಸ್ ನೇತೃತ್ವದ ಸರ್ಕಾರ ಪ್ರತಿ ಹಣಕಾಸು ವರ್ಷದಲ್ಲಿ 65 ಸಾವಿರ ಹೆಚ್-1ಬಿ ವೀಸಾ ನೀಡುವಿಕೆಗೆ ಮಿತಿಯನ್ನು ಹಾಕುತ್ತದೆ. ಅವುಗಳಲ್ಲಿ ಇನ್ನು ಮುಂದೆ ಮೊದಲ 20 ಸಾವಿರ ವೀಸಾ ಅರ್ಜಿಗಳನ್ನು ಕೌಶಲ್ಯಭರಿತ ಮತ್ತು ಹೆಚ್ಚು ವೇತನ ಪಡೆಯುವ ವಿದೇಶಿ ನೌಕರರಿಗೆ ನೀಡಲು ಸರ್ಕಾರ ಪ್ರಸ್ತಾವನೆ ಮಾಡಿದೆ.

ಸರ್ಕಾರದ ಈ ಹೊಸ ಪ್ರಸ್ತಾವನೆಯಿಂದ ಅಮೆರಿಕಾದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಸ್ನಾತಕೋತ್ತರ ಡಿಗ್ರಿ ಪಡೆದ ಅತಿ ಹೆಚ್ಚು ಕೌಶಲ್ಯಭರಿತ ಮತ್ತು ಅತಿ ಹೆಚ್ಚು ವೇತನ ಪಡೆಯುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಹೆಚ್ -ಬಿ ವೀಸಾಗೆ ಇನ್ನು ಮುಂದೆ ಎಲೆಕ್ಟ್ರಾನಿಕ್ ದಾಖಲಾತಿ ಸೌಲಭ್ಯ ನೀಡುವುದರಿಂದ ಅರ್ಜಿ ಸಲ್ಲಿಸುವವರಿಗೆ ಒಟ್ಟಾರೆ ಖರ್ಚು ಕಡಿಮೆಯಾಗಲಿದೆ ಮತ್ತು ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆಗಳ ಇಲಾಖೆ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.ಅರ್ಜಿದಾರರ ಆಯ್ಕೆ ಸಮಯವನ್ನು ಕೂಡ ಕಡಿಮೆ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com