ಮಾಲೆ (ಮಾಲ್ಡೀವ್ಸ್): ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಬುಧವಾರ ಮಿತ್ರರಾಷ್ಟ್ರಗಳದ ಚೀನಾ, ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾಗೆ ತನ್ನ ವಿಶೇಷ ಪ್ರತಿನಿಧಿಗಳನ್ನು ಕಲಿಸಿದ್ದಾರೆ.
ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅಬ್ದುಲ್ ಗಯೂಮ್ ನಿರ್ದೇಶನದ ಮೇರೆಗೆ ಆಡಳಿತ ಮಂಡಳಿಯ ಸದಸ್ಯರು ಮಾಲ್ಡೀವ್ಸ್ ನ ಸ್ನೇಹಪರ ರಾಷ್ಟ್ರದ ಪ್ರಮುಖರನ್ನು ಭೇಟಿಯಾಗಿ ಮಾಲ್ಡೀವ್ಸ್ ನ ಪ್ರಸಕ್ತ ಪರಿಸ್ಥಿತಿಯ ಕುರಿತು ವಿವರಿಸುತ್ತಾರೆ. ಅಧ್ಯಕ್ಷರ ಕಛೇರಿಯ ಹೇಳಿಕೆ ತಿಳಿಸಿದೆ.
ಮಾಲ್ಡೀವ್ಸ್ ಆರ್ಥಿಕ ಅಭಿವೃದ್ಧಿ ಸಚಿವ, ಮೊಹಮದ್ ಸಯೀದ್ ಚೀನಾಗೆ ತೆರಳಿದರೆ, ವಿದೇಶಾಂಗ ಸಚಿವ, ಡಾ ಮೊಹಮದ್ ಅಸಿಮ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಮೀನುಗಾರಿಕೆ ಮತ್ತು ಕೃಷಿ ಸಚಿವ ಮೊಹಮದ್ ಶೈನ್ ಗುರುವಾರದಂದು ಸೌದಿ ಅರೇಬಿಯಾಗೆ ತೆರಳುವವರಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮಾಲ್ಡೀವಿಯನ್ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಮಾಲ್ಡೀವ್ಸ್ ನಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ.
ಭಾರತವನ್ನು ಹೊರಗಿಟ್ಟು ದ್ವೀಪರಾಷ್ಟ್ರ ರಾಯಭಾರಿಗಳನ್ನು ಕಳಿಸುವ ನಿರ್ಧಾರಕ್ಕೆ ಬಂದಿದೆ. ಇದು ಭಾರತಕ್ಕೂ ಸಮಸ್ಯೆಯಾಗಲಿದೆ ಎಂದು ವಿದೇಶಂಗ ಇಲಾಖೆ ಅಭಿಪ್ರಾಯಪಟ್ಟಿದೆ. . . ಇದಕ್ಕೂ ಮುನ್ನ ಮಾಲ್ಡೀವ್ಸ್ ನಲ್ಲಿ ಭಾರತ ಮಿಲಿಟರಶಸ್ತಕ್ಷೇಪ ನಡೆಸುವುದನ್ನು ಚೀನಾ ವಿರೋಧಿಸಿತ್ತು.